ಮಹಿಳಾ ಪ್ರವೇಶದ ಬಳಿಕ ನಡೆಸಿದ ಶುದ್ದೀಕರಣ ತನ್ನ ಕರ್ತವ್ಯವಾಗಿತ್ತು-ತಂತ್ರಿವರ್ಯ ಕಂಠರರ್ ಮೋಹನನ್
0
ಫೆಬ್ರವರಿ 04, 2019
ತಿರುವನಂತಪುರ: ಶಬರಿಮಲೆ ಶ್ರೀಸನ್ನಿಧಿಗೆ ಯುವತಿಯರ ಪ್ರವೇಶದ ಬಳಿಕ ದೇವರ ಗರ್ಭಗೃಹದ ಬಾಗಿಲು ಮುಚ್ಚಿ ಶುದ್ದೀಕರಣ ಪ್ರಕ್ರಿಯೆಗಳನ್ನು ನಡೆಸಿರುವ ಬಗ್ಗೆ ತಂತ್ರಿ ಕಂಠಾರರ್ ಮೋಹನರ್ ಅವರು ಇಂದು ದೈವಸ್ವಂ ಬೋರ್ಡ್ ಮುಂದೆ ಪ್ರತಿಕ್ರಿಯೆ ನೀಡಿದರು.
ಗರ್ಭಗೃಹ ಮುಚ್ಚಿ ಅಗತ್ಯದ ಶುದ್ದೀಕರಣ ನಡೆಸಿರುವುದರಲ್ಲಿ ಯಾವುದೇ ಲೋಪಗಳಾಗಿಲ್ಲ, ಈ ಬಗ್ಗೆ ದೈವಸ್ವಂ ಬೋರ್ಡ್ ಸದಸ್ಯರ ಗಮನಕ್ಕೆ ಮೊದಲೇ ಮಾಹಿತಿ ನೀಡಲಾಗಿತ್ತು. ಜೊತೆಗೆ ಅದು ತನ್ನ ಕರ್ತವ್ಯವೂ ಆಗಿತ್ತು ಎಂದು ತಂತ್ರಿವರ್ಯರು ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ದೈವಸ್ವಂ ಬೋರ್ಡ್ ತಂತ್ರಿವರ್ಯರಿಂದ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು. ಅದರಂತೆ ತಂತ್ರಿವರ್ಯರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾಳೆ(ಮಂಗಳವಾರ) ದೇವಸ್ವಂ ಬೋರ್ಡ್ ನಡೆಸುವ ವಿಶೇಷ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.