ಕೇರಳ ಕನ್ನಡ ಸಾಹಿತ್ಯ ಸಂಗಮ ಯುವ ಸಮಿತಿಗಳ ವೇದಿಕೆ ರೂಪೀಕರಣ
0
ಫೆಬ್ರವರಿ 08, 2019
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಅವರ ಹುಟ್ಟೂರಿನಲ್ಲಿ ಸಾಹಿತ್ತಿಕ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಿ, ವಿವಿಧ ಶಾಲೆಗಳನ್ನು ಕೇಂದ್ರವಾಗಿರಿಸಿಕ್ಕೊಂಡು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಿ ಆ ಮೂಲಕ ಕನ್ನಡವನ್ನು ಗಡಿನಾಡು ಕಾಸರಗೋಡಿನಲ್ಲಿ ಇನ್ನಷ್ಟು ಬೆಳೆಸಿ ಉಳಿಸುವ ಧ್ಯೇಯೋದ್ದೆಶವನ್ನಿಟ್ಟುಕೊಂಡು ಯುವ ಸಾಹಿತಿಗಳ ಗುಂಪೊಂದು ಮಂಜೇಶ್ವರದಲ್ಲಿ ಕೇರಳ ಕನ್ನಡ ಸಾಹಿತ್ಯ ಸಂಗಮ ಎಂಬ ನಾಮದೊಂದಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಇದರ ರೂಪಿಕರಣ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚಿಗೆ ಮಂಜೇಶ್ವರದಲ್ಲಿ ಜರುಗಿತು. ಚುಟುಕು ಕವಿ, ಶಿಕ್ಷಕ, ನಟ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷರಾಗಿ ಆಯ್ಕೆಗೊಂಡರು. ಕವಿ, ಶಿಕ್ಷಕ ಗಣೇಶ್ ಪ್ರಸಾದ್ ನಾಯಕ್ ಮಂಜೇಶ್ವರ ಸಂಘಟನಾ ಕಾರ್ಯದರ್ಶಿ, ಕವಿ, ಶಿಕ್ಷಕ ಬಿ.ಎಂ ಮುಜುಕುಮೂಲೆ ಪ್ರಧಾನ ಕಾರ್ಯದರ್ಶಿ, ಅನಂತೇಶ್ವರ ಮಲ್ಯ ಮಂಜೇಶ್ವರ ಉಪಾಧ್ಯಕ್ಷರಾಗಿಯೂ, ಕವಿ ಗಣೇಶ್ ಪೈ ಬದಿಯಡ್ಕ ಖಜಾಂಚಿ ಮತ್ತು ಜಿ ವೀರೇಶ್ವರ ಭಟ್ ನೀರ್ಚಾಲು ಪ್ರಧಾನ ಸಲಹೆಗಾರರಾಗಿ, ರತನ್ ಕುಮಾರ್ ಹೊಸಂಗಡಿ ಅವರು ಮಾಧ್ಯಮ ಸಲಹೆಗಾರರಾಗಿ ಆಯ್ಕೆಗೊಂಡರು.