ಅರಂತೋಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ
0
ಫೆಬ್ರವರಿ 28, 2019
ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ಜರಗಿತು.
ದೇವಳದ ಜೀರ್ಣೋದ್ಧಾರ ನವೀಕರಣದ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಜೀರ್ಣೋದ್ಧಾರ ಕೆಲಸಗಳಿಗಾಗಿ ಧನಸಂಗ್ರಹ ಕಾರ್ಯವನ್ನು ಕ್ಷಿಪ್ರಗೊಳಿಸಲು ಕಾರ್ಯದರ್ಶಿ ಕಕ್ಕೆಪ್ಪಾಡಿ ವಿಷ್ಣು ಭಟ್ ಭಕ್ತರಲ್ಲಿ ವಿನಂತಿಸಿದರು. ವಾಸುದೇವ ಅಸ್ರ ಉಳಿಯ ಸಭೆಯ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಎಸ್.ಎನ್.ಮಯ್ಯ ಬದಿಯಡ್ಕ, ಸದಸ್ಯರಾದ ಬಟ್ಯ ನಾಯ್ಕ ಅರಂತೋಡು, ಕೃಷ್ಣ ಪ್ರಸಾದ ಅಡಿಗ ಮುಟ್ಟತ್ತೋಡಿ, ರವಿಶಂಕರ ತುಂಗ ಬನ್ನೂರು, ವಾಸುದೇವ ಹೊಳ್ಳ ಬನ್ನೂರು, ಗೋಪಾಲ ತುಂಗ ಬನ್ನೂರು, ರಾಮಚಂದ್ರ ಎಂ.ಜಿ.ಏರಿಕ್ಕಳ, ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ಕೃಷ್ಣ ಅರಂತೋಡು, ಶಂಕರ ಅರಂತೋಡು, ಚಂದ್ರ ಪಾಟಾಳಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಗಳಿಗೆ ಸೇವೆ ಸಲ್ಲಿಸಿದ ಭಕ್ತಾದಿಗಳನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.