ಜಿಲ್ಲಾ ಮಟ್ಟದ ಭೂಹಕ್ಕು ವಿತರಣೆ ಮೇಳ
0
ಫೆಬ್ರವರಿ 26, 2019
ಕಾಸರಗೋಡು: ಭೂಹಕ್ಕು ವಿತರಣೆಗೆ ಕಾನೂನು ಸಂಬಂ`À ತಾಂತ್ರಿಕತೆ ತಡೆಯಾಗಬಾರದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರಕಾರ ಪೂರೈಸಿದ ಒಂದು ಸಾವಿರ ದಿನದ ಅಂಗವಾಗಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಸಲುವಾಗಿ ಕಾಂಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಭೂಹಕ್ಕು ಪತ್ರ ವಿತರಣೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಒಂದೊಮ್ಮೆ ಹೆತ್ತವರಿಗೆ ಜಾಗವಿದ್ದೂ, ಅನೇಕ ದಶಕಗಳಿಂದ ಸ್ವಂತ ಜಾಗವಿಲ್ಲದರ ಸಂಕಷ್ಟದಲ್ಲಿರುವ ಮಂದಿ ಸ್ವಂತ ಜಾಗವಿಲ್ಲದೆ ಭೂಹಕ್ಕು ಪಡೆಯಲು ಅರ್ಹರಾದವರು ಅನೇಕ ಮಂದಿ ಇದ್ದಾರೆ. ಆದರೆ ಕಾನೂನು ಇವರ ಹೆತ್ತವರಿಗೆ ಜಾಗವಿದೆಯೆಂಬ ಕಾರಣಕ್ಕೆ ಭೂಹಕ್ಕು ಪ್ರಕಾರದ ಜಾಗ ನೀಡಲು ತಡೆಮಾಡುವ ಕ್ರಮ ಕೆಲವೆಡೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸರಿಯಾಗಿ ಪರಿಶೀಲಿಸಿ ಭೂಹಕ್ಕು ಪಡೆಯಲು ನಿಜವಾದ ಅರ್ಹತೆಯಿರುವವರಿಗೆ ಜಾಗ ಒದಗಿಸಲು ಪೂರಕ ವಾತಾವರಣ ಸೃಷ್ಟಿಯಾಗಬೇಕು ಎಂದು ಅವರು ಹೇಳಿದರು.
ಭೂಹಕ್ಕು ವಿತರಣೆಯಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಆದ್ಯತೆ ನೀಡಲಾಗುತ್ತಿದೆ. ಜಾಗದ ಲಭ್ಯತೆ ಹಿನ್ನೆಲೆಯಲ್ಲಿ 15 ಸೆಂಟ್ಸ್ ವರೆಗೆ ಮಾತ್ರ ಜಾಗ ನೀಡಲು ಈಗ ಸರಕಾರದ ತೀರ್ಮಾನವಿದೆ. ಅನೇಕ ವರ್ಷಗಳಿಂದ ಒಂದು ಜಾಗದಲ್ಲಿ ವಾಸಿಸುತ್ತಿರುವವರಿಗೆ ಜಾಗ ಒದಗಿಸಿಕೊಡುವಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೂ ಮನಮಾಡಬೇಕು. ಯೋಜನೆಯ ಯಶಸ್ಸಿಗಾಗಿ ರಜಾ ದಿನದಲ್ಲೂ ಅಧಿಕಾರಿಗಳು ಕರ್ತವ್ಯ ನಡೆಸುವ ಮನಮಾಡಬೇಕು ಎಂದವರು ಆಗ್ರಹಿಸಿದರು.
ಕೇರಳ ಭೂಮಿ ಕಾಯ್ದೆ ಪ್ರಕಾರ 245 ಭೂಹಕ್ಕು ಪತ್ರ, 15 ದೇವಸ್ವಂ ಭೂಹಕ್ಕು ಪತ್ರ, 258 ಎಲ್.ಟಿ. ಭೂಹಕ್ಕು ಪತ್ರ, 20 ಮಿಗತೆ ಜಾಗ ಭೂಹಕ್ಕು ಪತ್ರ ಹೀಗೆ ಒಟ್ಟು 538 ಭೂಹಕ್ಕುಪತ್ರ ವಿತರಣೆ ಸರಕಾರ ನಡೆಸಿದೆ. ಈ ಸರಕಾರದ ಒಂದು ಸಾವಿರ ದಿನ ಪೂರೈಕೆ ವೇಳೆ 1,05,000 ಭೂಹಕ್ಕು ಪತ್ರ ವಿತರಿಸಿದೆ. ಜೊತೆಗೆ 6057 ಇತರ ಭೂಹಕ್ಕು ಪತ್ರಗಳನ್ನೂ ನೀಡಲಾಗಿದೆ. ದಿನವೊಂದಕ್ಕೆ ಕನಿಷ್ಠ ನೂರು ಭೂಹಕ್ಕು ಪತ್ರ ನಡೆಸಲು ಸಾಧ್ಯವಾಗಿರುವುದು ಸರಕಾರದ ದೊಡ್ಡ ಸಾಧನೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ 4 ತಾಲೂಕುಗಳ ಗ್ರಾಮಾಧಿಕಾರಿಗಳಿಗೆ ಅಭಿನಂದನೆ ನಡೆಯಿತು. ಅತಿವೃಷ್ಟಿಯಲ್ಲಿ ಮೃತರಾದವರ ಕುಟುಂಬದ ಮಂದಿಗೆ ತಲಾ 2 ಲಕ್ಷ ರೂ. ಸಹಾಯಧನ ಸಚಿವರು ವಿತರಿಸಿದರು.
ಶಾಸಕ ಕೆ.ಕುಂಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್, ವಿ.ಕೆ.ರಮೇಶನ್, ಜೋಸೆಫ್ ವಡಗರ, ಕುಂಞÂರಾಮನ್ ನಾಯರ್ ಮೊದಲಾದವರು, ಸಹಾಯಕ ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದರು. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ವಂದಿಸಿದರು.