ನವಜೀವನ ಶಾಲೆಯಲ್ಲಿ ಕಲಿಕೋತ್ಸವ
0
ಫೆಬ್ರವರಿ 08, 2019
ಬದಿಯಡ್ಕ : ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಕೆ ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಉಪ ಮುಖ್ಯ ಶಿಕ್ಷಕಿ ತಂಗಮಣಿ, ನೌಕರ ಸಂಘದ ಕಾರ್ಯದರ್ಶಿ ಕರುಣಾಕರನ್ ಎಂ ಪಿ, ಬಿಆರ್‍ಸಿ ತರಬೇತುದಾರ ಈಶ್ವರ, ಶಿಕ್ಷಕಿಯರಾದ ಪುಂಡೂರು ಪ್ರಭಾವತಿ ಕೆದಿಲಾಯ, ದಿವ್ಯಾ ಟೀಚರ್, ವಿದ್ಯಾ ಟೀಚರ್, ಜ್ಯೋತ್ಸ್ನಾ ಟೀಚರ್, ನಿರಂಜನ್, ರಾಜೇಶ ಅಗಲ್ಪಾಡಿ ಮೊದಲಾದವರು ಉಪಸ್ಥಿತಿದ್ದರು. ನಾರಾಯಣ ಅಸ್ರ ಸ್ವಾಗತಿಸಿ, ಮರಿಯನ್ ವಂದಿಸಿದರು.
ಬಳಿಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನೇತೃತ್ವದಲ್ಲಿ ಏಕಾದಶಿ ದೇವಿ ಮಹಾತ್ಮ್ಯೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ವಾಸುದೇವ ಕಲ್ಲೂರಾಯ ಮಧೂರು, ಅಂಬೆಮೂಲೆ ಶಿವಶಂಕರ ಭಟ್, ಮುರಳಿ ಮಾಧವ ಮಧೂರು, ಆಕಾಶ್ ಬದಿಯಡ್ಕ ಭಾಗವಹಿಸಿದ್ದರು. ಪ್ರಭಾವತಿ ಕೆದಿಲಾಯ ಪುಂಡೂರು ಯಕ್ಷಗಾನದ ನೇತೃತ್ವ ವಹಿಸಿದ್ದರು. ಸುಮಾರು 21 ಮಂದಿ ಮಕ್ಕಳು ಅಭಿನಯಿಸಿದ್ದರು.