ಇಡಿಯಡ್ಕ ಶ್ರೀಕ್ಷೇತ್ರದ ಉತ್ಸವಗಳು ಇಂದು ಸಂಪನ್ನ
0
ಫೆಬ್ರವರಿ 04, 2019
ಪೆರ್ಲ: ಇಡಿಯಡ್ಕ ಶ್ರೀದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ 6ಕ್ಕೆ ಚಂಡಿಕಾ ಹವನ, ಭಜನಾ ಸತ್ಸಂಗ, ಚಂಡಿಕಾ ಹವನದ ಪೂರ್ಣಾಹುತಿ, ತುಲಾಭಾರ ಸೇವೆ, ಮಹಾಪೂಜೆ ನಡೆಯಿತು. ಅಪರಾಹ್ನ ಭಜನಾ ಸಂಕೀರ್ತನೆ, ಸಂಜೆ 6 ರಿಂದ ಕುಂಬಳೆ ಸೀಮೆಯಲ್ಲೇ ಅತ್ಯಪೂರ್ವವಾದ ಕಜಂಬು ಸೇವೆ ನಡೆಯಿತು. ಬಳಿಕ ರಾತ್ರಿ ಮಹಾಪೂಜೆ, ಶ್ರೀಉಳ್ಳಾಲ್ತಿ ದೈವದ ಭಂಡಾರ ಹೊರಡುವುದು, ಅಶ್ವರಥ ಸವಾರಿ, ಶ್ರೀಉಳ್ಳಾಲ್ತಿ ನೇಮ, ಪ್ರಸಾದ ವಿತರಣೆ ನಡೆಯಿತು.
ಸೋಮವಾರ ಬೆಳಿಗ್ಗೆ 8ಕ್ಕೆ ಶ್ರೀಸತ್ಯನಾರಾಯಣ ಪೂಜೆ, ಬಳಿಕ ಭಜನಾ ಸಂಕೀರ್ತನೆ, ಅಪರಾಹ್ನ 4 ರಿಂದ ಬದಿಯಡ್ಕದ ಶ್ರೀಶಾರದಾಂಬಾ ಯಕ್ಷಗಾನ ಕಲಾಸಂಘದವರಿಂದ ಮಹಿಷಮರ್ಧಿನಿ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ 7 ರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ರಾತ್ರಿ 7.30ಕ್ಕೆ ಮಹಾಪೂಜೆ, 8ಕ್ಕೆ ವಿಷ್ಣುಮೂರ್ತಿ ದೈವದ ಭಂಡಾರ ಹೊರಟು, 8.30ಕ್ಕೆ ದೈವಗಳ ತೊಡಂಙಲ್ ನಡೆಯಿತು. ಬಳಿಕ ಮೇಲರಿಗೆ ಅಗ್ನಿಸ್ಪರ್ಶ ನಡೆಸಲಾಯಿತು. 12ರಿಂದ ಕುಳಿಚ್ಚಾಟ, ಬೆಡಿಸೇವೆ ನಡೆಯಿತು. ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8.30 ರಿಂದ ಪ್ರಸಿದ್ದ ಗಾಯಕ-ಗಾಯಕಿಯರಿಂದ ಮ್ಯೂಸಿಕಲ್ ನೈಟ್, 11 ರಿಂದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು.
ಇಂದು(ಮಂಗಳವಾರ) ಮುಂಜಾನೆ 4ಕ್ಕೆ ಕೆಂಡಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 12ಕ್ಕೆ ಧ್ವಜಾವರೋಹಣ, ಮಹಾಪೂಜೆಯೊಂದಿಗೆ ಉತ್ಸವಗಳು ಸಂಪನ್ನಗೊಳ್ಳಲಿದೆ.