ಕಾಟುಕುಕ್ಕೆಯಲ್ಲಿ ಪುರಂದರದಾಸ ಆರಾಧನೋತ್ಸವ ಸಂಪನ್ನ
0
ಫೆಬ್ರವರಿ 10, 2019
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ 11 ನೇ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ದೀಪ ಪ್ರಜ್ವಲನ, ಹೊಸತಾಗಿ ಭಜನಾ ತರಬೇತಿ ಪಡೆದು ರಚನೆಗೊಂಡ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ನೆರೆದ ಸಮಸ್ತ ಮಹಿಳಾ ಭಜನಾ ಸದಸ್ಯೆಯರಿಂದ ಹಾಗು ಸಮಿತಿಯವರಿಂದ ಸಮೂಹ ಹರಿನಾಮ ಸಂಕೀರ್ತನೆ, ಮಧ್ಯಾಹ್ನದಿಂದ ಸಂಜೆಯ ವರೆಗೆ ದಾಸ ವೈಭವ, ಪುರಂದರದಾಸರು, ಕನಕದಾಸರು ಹೀಗೆ ದಾಸವರೇಣ್ಯರ ಕೀರ್ತನೆ-ಕೃತಿಗಳನ್ನಾಧರಿಸಿದ ವಿಶಿಷ್ಟ ಭಾವ-ರಸ-ಗುಣ-ಭಕ್ತಿ-ಚಿಂತನೆಯ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಈಶ್ವರದಾಸ ಕೊಪ್ಪೆಸರ, ಡಾ.ಎಸ್.ಪಿ.ಗುರುದಾಸ, ಕಲಾರತ್ನ ಶಂನಾ ಅಡಿಗ ಕುಂಬಳೆ, ಚಂದ್ರಕಾಂತ ಭಟ್ ಅಶ್ವತ್ಥಪುರ ಮೊದಲಾದ ಹರಿದಾಸರು ಭಾಗವಹಿಸಿದರು. ರಾಮಕೃಷ್ಣ ಕಾಟುಕುಕ್ಕೆ ಸಂಘಟಿಸಿದ್ದರು.