ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳೇ ಉತ್ತಮ : ಸಚಿವೆ ಶೈಲಜಾ
0
ಫೆಬ್ರವರಿ 04, 2019
ಕಾಸರಗೋಡು: ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳೇ ಉತ್ತಮ. ಈ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜ್ಯ ಸರಕಾರ ಯತ್ನಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.
ವಲಿಯಪರಂಬ ಗ್ರಾಮಪಂಚಾಯತ್‍ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಲಿಯಪರಂಬ ಗ್ರಾಮ ಪಂಚಾಯತ್‍ನ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೂ ಕುಟುಂಬ ಆರೋಗ್ಯ ಕೇಂದ್ರವಾಗಿ ಭಡ್ತಿಗೊಳಿಸಲಾಗುವುದು. ಇದಕ್ಕಾಗಿ 15 ಲಕ್ಷ ರೂ. ಮಂಜೂರು ಮಾಡಲಾಗುವುದು ಎಂದರು. ರಾಜ್ಯದ ಜನತೆಗೆ ಆರೋಗ್ಯ-ಆಯುಸ್ಸು ಅ„ಕವಾಗಿದ್ದರೂ, ಅಂಟುರೋಗಗಳ ಹಾವಳಿ, ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಬರುವ ಕಾಯಿಲೆಗಳು ಭೀತಿಯುಂಟು ಮಾಡುತ್ತಿವೆ. ಇದರ ನಿಯಂತ್ರಣಕ್ಕೆ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರತಿ ವಾರ್ಡ್‍ನಲ್ಲಿ 20 ಮನೆಗಳಿಗೊಂದರಂತೆ ಆರೋಗ್ಯ ಜಾಗೃತಿ ಸೇನೆ ರಚಿಸಲಾಗುವುದು. ವಾರಕ್ಕೊಮ್ಮೆ ಈ ಸೇನೆ ಮನೆಮನೆ ಸಂದರ್ಶನ ನಡೆಸಿ ಆರೋಗ್ಯ ಖಚಿತ ಪಡಿಸಲಿದೆ ಎಂದರು.
ಶಾಸಕ ಎಂ.ರಾಜಗೋಪಾಲನ್ ಆಸ್ಪತ್ರೆಯ ಪ್ರಯೋಗಾಲಯ ಉದ್ಘಾಟಿಸಿದರು. ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ„ಕಾರಿ ಡಾ.ಧನ್ಯಾ ಮನೋಜ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಪಿ.ಸಿ.ಝುಬೈದಾ, ವಲಿಯಪರಂಬ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಪಿ.ಪಿ.ಶಾರದಾ, ಆರೋಗ್ಯ ವಿಭಾಗ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಮಾಧವನ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎಂ.ಸಿ.ಸುಹರಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್, ಎನ್.ಎಚ್.ಎಂ. ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾಮಿ ವಾಮನ್ ಮೊದಲಾದವರು ಉಪಸ್ಥಿತರಿದ್ದರು.
ವಲಿಯಪರಂಬ ಗ್ರಾಮಪಂಚಾಯತ್ ಅಧ್ಯಕ್ಷ ಎಂ.ಟಿ.ಅಬ್ದುಲ್ ಜಬ್ಬಾರ್ ಸ್ವಾಗತಿಸಿದರು. ಟಿ.ಪಿ.ಉಷಾ ವಂದಿಸಿದರು.