ಕಾವ್ಯ ಕೈರಳಿಯ ಆಮಂತ್ರಣ ಬಿಡುಗಡೆ
0
ಫೆಬ್ರವರಿ 04, 2019
ಉಪ್ಪಳ: ಸುಬ್ಬಯ್ಯಕಟ್ಟೆಯ ಕೈರಳಿ ಪ್ರಕಾಶನದ ನೇತೃತ್ವದಲ್ಲಿ ಫೆ.9 ರಂದು ಕಾಸರಗೋಡಿನ ಸ್ಪೀಡ್ ವೇ ಸಭಾಂಗಣದಲ್ಲಿ ನಡೆಯುವ ಗಡಿನಾಡ ಕಾವ್ಯ ಕೈರಳಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಸುಬ್ಬಯ್ಯಕಟ್ಟೆಯಲ್ಲಿ ಶನಿವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಅವರು ಮಾತನಾಡಿ ಗಡಿನಾಡು ಕಾಸರಗೋಡಿನ ಕನ್ನಡ ಭಾಷಾ ಅನನ್ಯತೆ ಸ್ತುತ್ಯರ್ಹವಾದುದು. ಸ್ವಚ್ಚ ಕನ್ನಡ ಭಾಷೆಯ ಉಳಿವು-ಬೆಳವಣಿಗೆಗಾಗಿ ಕಲೆ, ಸಾಹಿತ್ಯಗಳ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡ ಕೈರಳಿಯ ಕಾರ್ಯಕ್ರಮಗಳು ಶ್ಲಾಘನೀಯ ಎಂದು ತಿಳಿಸಿದರು.
ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಪ್ರೊ. ಎ. ಶ್ರೀನಾಥ, ಯಕ್ಷದ್ರುವ ಪಟ್ಲ ಫೌಂಡೇಷನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಸ್ವತಂತ್ರ ಕರ್ಷಕ ಸಂಘ ಪೈವಳಿಕೆ ಪಂಚಾಯತಿ ಸಮಿತಿ ಅಧ್ಯಕ್ಷ ಬಿ ಕೆ ಖಾದರ್ ಹಾಜಿ, ಅಖಿಲೇಶ್ ನಗುಮುಗಮ್ ಮುಂತಾದವರು ಉಪಸ್ಥಿತರಿದ್ದರು.