ಮಂಜೇಶ್ವರ : ಬೆರಳೆಣಿಕೆಯ ವರ್ಷಗಳಲ್ಲೇ ಕ್ರೀಡೆ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ಶ್ಲಾಘನೀಯ ಸಾಧನೆಯನ್ನು ಗೈದು ತೂಮಿನಾಡಿಗೆ ಕೀರ್ತಿಯನ್ನು ತಂದ ತೂಮಿನಾಡು ಅರಬ್ ರೈಡ್ರಸ್ ಕ್ಲಬ್ ನ ವತಿಯಿಂದ ಫೆ.3 ರಂದು ತೂಮಿನಾಡು ಸಿರಾಜುಲ್ ಹುದಾ ಮದ್ರಸ ಕಟ್ಟಡದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಯೇನಪೋಯ ವೈದ್ಯಕೀಯ ಕಾಲೇಜು ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ನಡೆಯುವ ಈ ರಕ್ತದಾನ ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ನಡೆಯಲಿದೆ. ಶಿಬಿರಕ್ಕೂ ಮೊದಲು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಖ್ಯಾತ ವೈದ್ಯರುಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವರೆಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.