HEALTH TIPS

ಯುಡಿಎಫ್ ನೇತೃತ್ವದ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲ:ಬಿಜೆಪಿ ಆರೋಪ

ಪೆರ್ಲ:ಎಲ್‍ಡಿಎಫ್‍ನೊಂದಿಗೆ ಅಪವಿತ್ರ ಮೈತ್ರಿ, ಅವಿಶ್ವಾಸ ಮಂಡನೆ ಮೂಲಕ ಬಿಜೆಪಿಯಿಂದ ಅಧಿಕಾರ ಕಸಿದ ಯುಡಿಎಫ್ ಆಡಳಿತ ಸಂಪೂರ್ಣ ವಿಫಲತೆಯಿಂದ ಕೂಡಿರುವುದಾಗಿ ಎಣ್ಮಕಜೆ ಬಿಜೆಪಿ ಪಂಚಾಯಿತಿ ಸಮಿತಿ ಆರೋಪಿಸಿದೆ. 2017-18ರ ಬಿಜೆಪಿ ನೇತೃತ್ವದ ಗ್ರಾಮ ಪಂಚಾಯಿತಿ ಆಡಳಿತಾವಧಿಯಲ್ಲಿ ನೂರು ಶೇ. ಅನುದಾನ ಖರ್ಚು ಮಾಡಿದ ಸಾಧನೆಗೆ ರಾಜ್ಯ ಸರಕಾರದ ಪ್ರಶಸ್ತಿ ಲಭಿಸಿರುವುದು ಬಿಜೆಪಿ ಆಡಳಿತದಲ್ಲಿ ಪಂಚಾಯಿತಿ ಅಭಿವೃದ್ಧಿಯ ಉತ್ತುಂಗಕ್ಕೇರಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆದರೆ ಈ ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸದೆ ಇದರ ಹಿಂದೆ ದುಡಿದ ಉದ್ಯೋಗಸ್ಥರಿಗೆ ಕೃತಜ್ಞತೆ ಹೇಳುವ ಸೌಜನ್ಯ ತೋರದೆ, ಗೌಪ್ಯವಾಗಿರಿಸಿದುದು ಯುಡಿಎಫ್ ಹಾಗೂ ಈಗಿನ ಅಧ್ಯಕ್ಷೆಯ ಅಸಹನೆ ಹಾಗೂ ಅಸಹಿಷ್ಣುತೆಯ ಪರಮಾವಧಿಯಾಗಿದ್ದು ಪಂ.ಅಧ್ಯಕ್ಷೆ ಕೇವಲ ಪತ್ರಿಕಾ ಹೇಳಿಕೆಗಳ ಅನುಭವಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪ್ರಸ್ತುತ 2018-19ರ ಆರ್ಥಿಕ ವರ್ಷದ ಯೋಜನೆಯ ಶೇಕಡಾ 75ರಷ್ಟು ಚಟುವಟಿಕೆಗಳು ಬಿಜೆಪಿ ಆಡಳಿತದ ಅವಧಿಯಲ್ಲೇ ಪೂರ್ಣಗೊಂಡಿದ್ದರೂ ಅದನ್ನು ಜನತೆಗೆ ತಲುಪಿಸುವಲ್ಲಿ ಯುಡಿಎಫ್ ಆಡಳಿತ ಸಂಪೂರ್ಣ ವಿಫಲವಾಗಿದೆ.ಅನುದಾನ ಖರ್ಚಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹಿಂದುಳಿದಿರುವ ದಾಖಲೆಗಳಿವೆ. 2012-15ರ ಯುಡಿಎಫ್ ಆಡಳಿತಾವಧಿಯಲ್ಲಿ ಬಡ್ಸ್ ಶಾಲಾ ಕಟ್ಟಡದ ನವೀಕರಣ ನಡೆಸಲು ಮೊತ್ತ ಲಭಿಸಿದಾಗ ಅದನ್ನು ಪೂರ್ತಿಗೊಳಿಸದೇ, ಇದೀಗ ಯೋಜನೆ ಬಗ್ಗೆ ಹುಸಿ ಮಾಹಿತಿ ನೀಡಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ಯಾತಕ್ಕೆ ಎಂದು ಜನತೆ ಪ್ರಶ್ನಿಸುವಂತಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಸಾಯಿ ಟ್ರಸ್ಟ್ ವತಿಯಿಂದ ದೊರೆಯುವ 2 ಕೋಟಿ ಮೊತ್ತದ ಯೋಜನೆಯಲ್ಲಿ ಬಜಕೂಡ್ಲುವಿನಲ್ಲಿ ಆರಂಭಿಸಿದ ಬಡ್ಸ್ ಶಾಲೆ,ಆಯುಷ್ ಆಸ್ಪತ್ರೆ ಹಾಗೂ ಎಂಡೋಸಲ್ಫಾನ್ ಪೀಡಿತರ ವಸತಿ ಯೋಜನೆಯನ್ನು ಬುಡಮೇಲು ಗೊಳಿಸುವ ಯುಡಿಎಫ್ ಯತ್ನ ಜನತೆಗೆ ಮಾಡುವ ವಂಚನೆಯಾಗಿದೆ. ಅತೀ ಬಡವರಾದ ಸುಮಾರು ನೂರರಷ್ಟು ಕುಟುಂಬಗಳಿಗೆ ಆಶ್ರಯ ಯೋಜನೆಯಲ್ಲಿ ಅಳವಡಿಸಿ ನಡೆಸುವ ಯೋಜನೆಯನ್ನು ಇದುವರೆಗೂ ಪ್ರಾರಂಭಿಸದೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಶನ್ ಹುದ್ದೆ ಖಾಲಿ ಇದ್ದೂ ನೇಮಕಾತಿ ನಡೆಸದ ಯುಡಿಎಫ್ ಆಡಳಿತ ಕುಟುಂಬಶ್ರೀ ಕ್ಯಾಂಟೀನ್ ಯೋಜನೆಯ ಟೆಂಡರ್ ನಡೆಸಿಲ್ಲ.2019-20ರ ಯೋಜನಾ ಮೊತ್ತವಾಗಿ ಶೇಕಡಾ 10ರಷ್ಟು ಕಡಿತಗೊಂಡ ಅನುದಾನವನ್ನು ಸರಿಪಡಿಸಿ ಜನತೆಗೆ ತಲುಪಿಸಲು ವಿಫಲವಾಗಿದೆ.ವಿಕಲ ಚೇತನರಿಗಿರುವ ಯೋಜನೆಯನ್ನು ರದ್ಧುಗೊಳಿಸಿ ಅನ್ಯಾಯವೆಸಗಿದೆ.ಉದ್ಯೋಗ ಖಾತರಿ ಯೋಜನೆ ಹಳಿ ತಪ್ಪಿ ಹೋಗಿದೆ. ಈ ಅವ್ಯವಸ್ಥೆಗಳನ್ನೆಲ್ಲಾ ಸರಿಪಡಿಸಿ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸುವ ಬದಲು ಬಿಜೆಪಿ ಆಡಳಿತದ ಯೋಜನೆಗಳನ್ನು ಉದ್ಘಾಟಿಸುವ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ಬಿಜೆಪಿ ಪಂ.ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries