ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ
0
ಫೆಬ್ರವರಿ 04, 2019
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಭೌತ ಶಾಸ್ತ್ರ ಅಧ್ಯಾಪಕ ಗಂಗಾಧರನ್ ಎಂ. ಮಾತನಾಡಿ ಜೀವನದಲ್ಲಿ ಗುರಿ ತಲುಪುವುದಕ್ಕೆ ಕಠಿಣ ಪರಿಶ್ರಮ ವಹಿಸಲೇ ಬೇಕಾಗುತ್ತದೆ. ಕೇವಲ ಪಠ್ಯ ಪುಸ್ತಕ ಓದಿ ಅಂಕಗಳಿಸಿದರೆ ಸಾಲದು. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ವಿದ್ಯಾರ್ಥಿಗಳಿಗೆ ಓದಿನ ವಿಶ್ಲೇಷಣೆ, ಅನ್ವೇಷಣೆ ಜೊತೆಗೆ ದೇಶದ ಪರಂಪರೆ, ಇತಿಹಾಸ ಹಾಗು ಭೌಗೋಳಿಕ ಅಂಶಗಳ ಅರಿವು ಬಹಳ ಮುಖ್ಯವೆಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಶ್ರೀಸುಬ್ರಹ್ಮಣ್ಯೇಶ್ವರ ಸೇವಾ ಸಂಘದ ಅಧ್ಯಕ್ಷ ಸಂಜೀವ ರೈ ಉದ್ಘಾಟಿಸಿದರು. ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಮುಖ್ಯೋಪಾಧ್ಯಾಯ ಸುಧೀರ್ ಕುಮಾರ್ ರೈ, ಆಡಳಿತ ಮಂಡಳಿ ಸದಸ್ಯರಾದ ವಿನೋಬಾ ಶೆಟ್ಟಿ, ಬಿ.ಎಸ್.ಗಾಂಭೀರ್, ಅರುಣಾಲತಾ, ರಾಜೇಶ್ವರಿ ಬಜಕೂಡ್ಲು, ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಅಧ್ಯಾಪಕರು ಉಪಸ್ಥಿತರಿದ್ದರು.
ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವರ್ಷಿತ, ಮೆಡಲ್‍ಗಳನ್ನು ಪಡೆದ ಎನ್‍ಸಿಸಿ ವಿದ್ಯಾರ್ಥಿಗಳನ್ನು, ಈ ವರ್ಷದ ಹೈಯರ್ ಸೆಕೆಂಡರಿ ಪ್ರತಿಭೆಗಳಾದ ಅಶ್ವತಿ ಕೆ, ಸಜಿತ್ ಎಂ, ಅನುಶ್ರೀ ಕೆ, ಅನೀನ ವಿ.ಜಾರ್ಜ್, ಆಯಿಷಾ ಶಾಹಮ ಫಿದಾ, ಕವಿತಾ ಎಸ್.ಪೈ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಸಾಯ ಬರೆದ `ಪ್ರತಿಬಿಂಬ' ಕವನ ಸಂಕಲನವನ್ನು ಮುಖ್ಯ ಅತಿಥಿಗಳು ಬಿಡುಗಡುಗೊಳಿಸಿದರು. ಅಧ್ಯಾಪಕ ಲೋಕನಾಥ್ ಶೆಟ್ಟಿ ಸ್ವಾಗತಿಸಿ, ರಮಣಿ ಎಂ.ಎಸ್. ವಂದಿಸಿದರು. ರಾಜೇಶ್ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು.