HEALTH TIPS

ಡಾ.ಕಾವ್ಯಶ್ರೀ ಕುಳಮರ್ವರಿಗೆ ಎಂ.ಡಿ.ಪ್ರಥಮ ಸ್ಥಾನ

                 ಕುಂಬಳೆ: ಇತ್ತೀಚೆಗೆ ಪ್ರಕಟವಾದ ಆಯುರ್ವೇದ ವೈದ್ಯಕೀಯ ಎಂ.ಡಿ.ಸ್ನಾತಕೋತ್ತರ ಪದವಿಯ ಮಾನಸರೋಗ ವಿಭಾಗದಲ್ಲಿ ಡಾ. ಕಾವ್ಯಶ್ರೀ ಕುಳಮರ್ವ ಶೇಕಡಾ 80 ಅಂಕಗಳೊಂದಿಗೆ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ .
      ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆ ಹಾಗೂ ಸರಕಾರೀ ಹೈಸ್ಕೂಲುಗಳ ಹಳೆ ವಿದ್ಯಾರ್ಥಿನಿಯಾದ ಈಕೆ ಮೈಸೂರಿನ ಸರಕಾರೀ ಆಯುರ್ವೇದ ಕಾಲೇಜಿನಲ್ಲಿ ಸ್ನಾತಕ ಪದವಿಯನ್ನು ಪೂರೈಸಿ ಹಾಸನದ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಗರಿಷ್ಠ ಅಂಕಗಳೊಂದಿಗೆ ಗಳಿಸಿದರು. ಈ ನಿಮಿತ್ತವಾಗಿ ಇತ್ತೀಚೆಗೆ ಅವರನ್ನು ಕಾಲೇಜಿನಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಪ್ರಕೃತ ಇವರು ಬೆಂಗಳೂರಿನ `ನಿಮಾನ್ಸ್'ಸಂಸ್ಥೆಯಲ್ಲಿ ಹಿರಿಯ ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
      ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವರ ಪುತ್ರಿಯಾದ ಈಕೆ ಯಶಸ್ವಿ ಪಟ್ಣಡ್ಕರ ಪತ್ನಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries