ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಅಥವಾ ಮೋದಿ ಕೈಯಲ್ಲಿ ಇಲ್ಲ: ಇಮ್ರಾನ್ ಖಾನ್
0
ಫೆಬ್ರವರಿ 28, 2019
ಇಸ್ಲಾಮಾಬಾದ್: ಒಂದು ವೇಳೆ ಯುದ್ಧ ಆರಂಭವಾದರೆ ಅದು ಹೇಗೆ ಅಂತ್ಯವಾಗುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಅದರ ನಿಯಂತ್ರಣ ನನ್ನ ಕೈಯಲ್ಲೂ ಇರುವುದಿಲ್ಲ ಮತ್ತು ಮೋದಿ ಕೈಯಲ್ಲೂ ಇರುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್? ಖಾನ್ ಅವರು ಬುಧವಾರ ಹೇಳಿದ್ದಾರೆ.
ಭಾರತ- ಪಾಕಿಸ್ತಾನ ಗಡಿಯಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಶಾಂತಿ ಮಾತುಕತೆಯ ಮಾತನಾಡಿರುವ ಇಮ್ರಾನ್? ಖಾನ್?, ಭಯೋತ್ಪಾದನೆ ಬಗ್ಗೆ ನಿಮಗೆ ಏನಾದರೂ ಮಾತನಾಡಬೇಕಿದ್ದರೆ ನಾವು ಸಿದ್ಧರಿದ್ದೇವೆ. ನಮ್ಮ ನಡುವಿನ ಸದುದ್ದೇಶಕ್ಕೆ ಜಯವಾಗಬೇಕು. ನಾವಿಬ್ಬರೂ ಕುಳಿತು ಚರ್ಚೆ ಮಾಡಬೇಕಿದೆ ಎಂದಿದ್ದಾರೆ.
ಈ ಜಗತ್ತಿನ ಎಲ್ಲ ಯುದ್ಧಗಳು ನಡೆದಿರುವುದೂ ತಪ್ಪು ಲೆಕ್ಕಾಚಾರಗಳಿಂದಲೇ. ಇದುವರೆಗೆ ಯುದ್ಧ ಆರಂಭಿಸಿದವರಿಗೆಲ್ಲ ತಾವು ಆರಂಭಿಸಿದ ಯುದ್ಧ ಎಲ್ಲಿ ಅಂತ್ಯವಾಗುತ್ತದೆ ಎಂಬುದೇ ತಿಳಿದಿರಲಿಲ್ಲ. ಹೀಗಾಗಿ ನಾನು ಭಾರತಕ್ಕೆ ಹೇಳುವುದೇನೆಂದರೆ, ನೀವು ಶಸ್ತ್ರಾಸ್ತ್ರಗಳೊಂದಿಗೆ ಬಂದರೆ ನಮ್ಮ ಬಳಿಯೂ ಆಯುಧಗಳಿವೆ. ನಾವು ತಪ್ಪು ಲೆಕ್ಕಾಚಾರಗಳಿಗೆ ಜಾಗ ಮಾಡಿಕೊಡಬೇಕೆ? ಎಂದು ಪಾಕ್ ಪ್ರಧಾನಿ ಪ್ರಶ್ನಿಸಿದ್ದಾರೆ.
ಭಾರತದಿಂದ ಪ್ರಚೋದನೆ ಬಂದಾಗ ಪಾಕಿಸ್ತಾನವು ಎರಡು ಭಾರತೀಯ ಯುದ್ಧವಿಮಾನಗಳನ್ನು ಒಡೆದುರುಳಿಸಿತು. ಆದರೆ, ನಾವು ಯಾವುದೇ ವ್ಯಕ್ತಿ ಹಾಗೂ ಸೇನಾ ಪಡೆಗಳಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದವು. ನಮ್ಮನ್ನು ಪ್ರಚೋದಿಸಿದಾಗ ಸರಿಯಾಗಿ ತಿರುಗೇಟು ಕೊಡುವಷ್ಟು ಸಾಮಥ್ರ್ಯ ನಮ್ಮಲ್ಲಿದೆ ಎಂದು ನಾವು ತೋರಿಸಬೇಕಿತ್ತು ಅಷ್ಟೇ… ನೀವು ನಮ್ಮ ದೇಶದೊಳಗೆ ಪ್ರವೇಶ ಮಾಡಿದಾಗ ನಾವೂ ಕೂಡ ನಿಮ್ಮ ಗಡಿಯೊಳಗೆ ಬರಬಲ್ಲೆವು. ಪಾಕಿಸ್ತಾನದ ವಾಯು ಪ್ರದೇಶದೊಳಗೆ ಬಂದ 2 ಮಿಗ್ ಯುದ್ಧವಿಮಾನಗಳನ್ನ ನಾವು ಕೆಳಗುರುಳಿಸಿದೆವು. ಆದರೆ, ಇಷ್ಟಾದ ನಂತರ ನಮ್ಮ ಮುಂದಿನ ದಾರಿಗಳೇನು? ನಾವು ಕುಳಿತು ಮಾತುಕತೆ ಮೂಲಕ ನಮ್ಮ ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.