ಯೋಜನೆಗಳನ್ನು ತಡೆಯಲು ಉದ್ಯೋಗಿಗಳ ವರ್ಗಾವಣೆ ಆರೋಪ
0
ಫೆಬ್ರವರಿ 06, 2019
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯಿತಿನ ಕಾರ್ಯದರ್ಶಿ ಸಹಿತ ಇತರ ಉದ್ಯೋಗಿಗಳನ್ನು ಪದೇ ಪದೇ ವರ್ಗಾಯಿಸುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಮೊಟಕುಗೊಳಿಸಲು ಸರಕಾರ ಯತ್ನಿಸುತ್ತಿದೆ ಎಂದು ಮುಸ್ಲಿಂ ಲೀಗ್ ಮುಳಿಯಾರು ಪಂಚಾಯಿತಿ ಸಮಿತಿ ಸಭೆಯು ಆರೋಪಿಸಿದೆ.
ಜನರ ಅಕಾಂಕ್ಷೆಯನ್ನು ಬದಿಗೊತ್ತಿ ಸಿಪಿಎಂ ಪಕ್ಷದ ಪ್ರಾದೇಶಿಕ ಸಮಿತಿಯ ಇಚ್ಛೆಗನುಸಾರವಾಗಿ ಸರಕಾರವು ವರ್ತಿಸುತ್ತಿರುವÀ ರಾಜಕೀಯ ಕುತಂತ್ರಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಭೆಯು ಎಚ್ಚರಿಕೆ ನೀಡಿದೆ.
ಮುಸ್ಲಿಂಲೀಗ್ ಮುಳಿಯಾರು ಪಂಚಾಯತಿ ಸಮಿತಿಯ ಸಭೆಯನ್ನು ಜಿಲ್ಲಾ ಅಧ್ಯಕ್ಷ ಎಂ.ಎಸ್.ಮುಹಮ್ಮದ್ ಕುಂಞÂ ಉದ್ಘಾಟಿಸಿದರು. ಕೆ.ಬಿ.ಮುಹಮ್ಮದ್ ಕುಂಞÂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೂಸಾ.ಬಿ, ಎ.ಬಿ.ಶಾಫಿ, ಖಾಲಿದ್ ಬೆಳ್ಳಿಪ್ಪಾಡಿ, ಎಸ್.ಎಂ.ಮುಹಮ್ಮದ್ ಕುಂಞÂ, ಎಂ.ಕೆ.ಅಬ್ದುಲ್ ರಹಿಮಾನ್ ಹಾಜಿ, ಬಿ.ಎಂ.ಅಶ್ರಫ್, ಪಿ.ಎ.ಹಸೈನಾರ್, ಶೆರೀಫ್ ಕೊಡವಂಜಿ, ಮನ್ಸೂರ್ ಮಲ್ಲತ್ತ್ ಉಪಸ್ಥಿತರಿದ್ದರು.