ಶಬರಿಮಲೆ ಪುನರ್ ಪರಿಶೀಲನಾ ಅರ್ಜಿ ವಾದ ಆಲಿಸುವಿಕೆ ಪೂರ್ಣ
0
ಫೆಬ್ರವರಿ 06, 2019
ದೆಹಲಿ: ಶಬರಿಮಲೆಗೆ ಸ್ತ್ರೀಯರಿಗೆ ನೀಡಿರುವ ಮುಕ್ತ ಪ್ರವೇಶ ಸಂಬಂಧಿಸಿ ಅಗತ್ಯ ಬದಲಾವಣೆಗಳಿಗೆಸಮರ್ಪಿಸಲಾಗಿದ್ದ ಪುನರ್ ಪರಿಶೀಲಾ ಅರ್ಜಿಯ ವಿಚಾರಣೆ ಇಂದು ಪರಮೋಚ್ಚ ನ್ಯಾಯಾಲಯದಲ್ಲಿ ಪೂರ್ಣಗೊಂಡಿತು. ಆದರೆ ಈ ಬಗ್ಗೆ ತೀರ್ಪು ನೀಡುವುದನ್ನು ನ್ಯಾಯಾಲಯ ಮುಂದೂಡಿ ಕಲಾಪ ಸಮಾಪ್ತಿಗೊಂಡಿತು. ಜೊತೆಗೆ ವಾದಿಸಲು ಅವಕಾಶ ಲಭಿಸದವರು ತಮ್ಮ ವಾದಗಳನ್ನು ಮುಂದಿನ ಏಳು ದಿನಗಳೊಳಗೆ ಬರೆದು ಸಮರ್ಪಿಸಲು ಪರಮೋಚ್ಚ ನ್ಯಾಯಾಲಯ ನಿರ್ದೇಶನ ನೀಡಿತು.
ಮುಖ್ಯ ನಾಯಮೂರ್ತಿಗಳಾದ ಚೀಫ್ ಜಸ್ಟೀಸ್ ರಂಜನ್ ಗೊಗೋಯ್ ಅವರನ್ನೊಳಗೊಂಡ ಪೀಠ ವಿಚಾರಣೆ ಕೈಗೆತ್ತಿಕೊಂಡಿದೆ.ಇಂದು ಬೆಳಿಗ್ಗೆ 10.30ರ ವೇಳೆಗೆ ಪುನರ್ ಪರಿಶೀಲನಾ ಅರ್ಜಿಗಳ ವಾದಗಳ ಆಲಿಸುವಿಕೆ ಆರಂಭಗೊಂಡಿತು.
ಮೊದಲಿಗೆ ಎನ್‍ಎಸ್‍ಎಸ್ ಗಾಗಿ ವಾದಿಸುತ್ತಿರುವ ನ್ಯಾಯವಾದಿ ಕೆ.ಪರಾಶರ ವಾದ ಮಂಡಿಸಿದರು. ಈ ಮೊದಲು ನೀಡಿರುವ ತೀರ್ಪಲ್ಲಿ ಕೆಲವು ನ್ಯೂನತೆಗಳಿವೆ. ಅವರು ತಮ್ಮ ವಾದದಲ್ಲಿ ಶಬರಿಮಲೆ ನಂಬಿಕೆಗೆ ಸಂಬಂಧಿಸಿ ಅಲ್ಲಿ ಅನುಷ್ಠಾನದಲ್ಲಿರುವುದು ಸ್ತ್ರೀ ವಿರೋಧಿ ಚಿಂತನೆಯಲ್ಲ. ಅದು ತಲಾಂತರದ ನಂಬಿಕೆಯಾಗಿದ್ದು, ಒಂದು ಪರಿಮಿತಿಯೊಳಗಿನ ಸ್ತ್ರೀಯರನ್ನು ಮಾತ್ರ ಪ್ರವೇಶಿಸ ಕೂಡದೆಂಬ ನಿರ್ಬಂಧ ವಿಧಿಸಿದೆ. ರಾಷ್ಟ್ರದ ಸಂವಿಧಾನದ ಆರ್ಟಿಕಲ್ 15ರಂತೆ ಸ್ತ್ರೀಯರಿಗೆ ಪೂರ್ತಿ ನಿರ್ಬಂಧ ವಿಧಿಸಿಲ್ಲ ಎಂದು ಅವರು ಬೊಟ್ಟು ಮಾಡಿದರು. ಜೊತೆಗೆ ಆರಾಧನಾಲಯಗಳು ಸಾರ್ವಜನಿಕ ಸ್ಥಳಗಳಲ್ಲ ಎಂದು ವಾದಿಸಿದರು.
ಈ ಬಗ್ಗೆ ಪ್ರತಿವಾದ ನಡೆಸಿದ ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಅವರು, ನಿರ್ಬಂಧಿತ ಪ್ರಾಯದ ಮಹಿಳೆಯರ ಪ್ರವೇಶ ನಿಶಿದ್ದವೂ ಮಹಿಳಾ ವಿರೋಧಿ ಕ್ರಮವಾಗಿ ಪರಿಗಣಿಸಬೇಕು ಎಂದು ವಾದಿಸಿದರು. ಧಾರ್ಮಿಕತೆಗೆ ಸಂಬಂಧಿಸಿ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖಗಳಿಲ್ಲ. ಈ ಹಿನ್ನೆಲೆಯಲ್ಲಿ ಬೇಕಾದಂತೆ ಬಳಸಬಹುದಾಗಿದೆ ಎಂದು ಅವರು ತಿಳಿಸಿದರು.ಅಷ್ಟು ಸುಲಭದಲ್ಲಿ ಧರ್ಮದ ವ್ಯಾಖ್ಯಾನ ಅಸಾಧ್ಯ ಎಂದೂ ಅವರು ಈ ಸಂದರ್ಭ ತಮ್ಮ ವಾದ ಮುಂದಿಟ್ಟರು.
ಈ ಮಧ್ಯೆ ಮುಖ್ಯ ನ್ಯಾಯಮೂರ್ತಿಗಳು ವಾದಿಗಳನ್ನು ಉದ್ದೇಶಿಸಿ ಪುನರ್ ಪರಿಶೀಲನಾಅರ್ಜಿಯನ್ನು ಯಾಕಾಗಿ ಸಲ್ಲಿಸಲಾಗಿದೆ ಎಂದು ಪ್ರಶ್ನಿಸಿದರು.ಈ ಸಂದರ್ಭ ನ್ಯಾಯವಾದಿ ಕೆ.ಪರಾಶರ ಅವರು ಈ ಮೊದಲು ನೀಡಿದ ಹೇಳಿಕೆಯನ್ನು ಬಲವಾಗಿ ಪುನರುಚ್ಚರಿಸಿದರು. ಇಂದು 8 ಅರ್ಜಿಗಳನ್ನು ಆಲಿಸಿದ ಪರಮೋಚ್ಚ ನ್ಯಾಯಾಲಯ ಮಿಕ್ಕುಳಿದವರು ಬರಹದ ಮೂಲಕ ಸಮರ್ಪಿಸುವಂತೆ ಆದೇಶ ನೀಡಿತು. ಒಟ್ಟು ಈ ಬಗ್ಗೆ 56 ಪುನರ್ ಪರಿಶೀಲನಾ ಅರ್ಜಿ ಸಲಲಿಕೆಯಾಗಿದ್ದು, ಈ ಹಿಂದೆ ಪರಮೋಚ್ಚ ನ್ಯಾಯಾಲಯ ನೀಡಿದ ತೀರ್ಪಿನಲ್ಲಿರುವ ತೊಂದರೆಯನ್ನು ಮಾತ್ರ ವಾದಿಸಿ ಎಂದು ರಂಜನ್ ಗೊಗೋಯ್ ಆದೇಶಿಸಿದರು.