ಕಾಟುಕುಕ್ಕೆಯಲ್ಲಿ ದಾಸ ವೈಭವ
0
ಫೆಬ್ರವರಿ 05, 2019
ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಭಾನುವಾರ ನಡೆದ ಶ್ರೀ ಪುರಂದರದಾಸ ಆರಾಧನೋತ್ಸವದ ಪ್ರಯುಕ್ತ ದಾಸ ವೈಭವ ವಿಶೇಷ ಕಾರ್ಯಕ್ರಮ ನಡೆಯಿತು.
ಹರಿದಾಸರುಗಳಾದ ಈಶ್ವರದಾಸ ಕೊಪ್ಪೇಸರ, ಡಾ. ಯಸ್.ಪಿ.ಗುರುದಾಸ್, ಕಲಾರತ್ನ ಶಂನಾಡಿಗ ಕುಂಬ್ಳೆ ಹಾಗೂ ಚಂದ್ರಕಾಂತ ಭಟ್ ಅಶ್ವತ್ಥಪುರ ಭಾಗವಹಿಸಿ ಸಂಕೀರ್ತನೆ ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ, ಶಿವರಾಮ ಭಾಗವತ್ (ಹಾರ್ಮೋನಿಯಮ್) ಎನ್.ಜಿ. ಹೆಗ್ಡೆ, ಪ್ರಕಾಶ್ ಸಪ್ರೆ (ತಬ್ಲಾ)ದಲ್ಲಿ ಸಹಕರಿಸಿದರು. ಕಾರ್ಯಕ್ರಮ ಸಂಯೋಜಕರಾದ ರಾಮಕೃಷ್ಣ ಕಾಟುಕುಕ್ಕೆ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಕಿಶೋರ್ ಪೆರ್ಲ, ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಉಪಸ್ಥಿತರಿದ್ದರು.