ಶಿಲಾಕಲ್ಲು ಸ್ಥಾಪನೆಗೆ ಮೆರವಣಿಗೆ
0
ಫೆಬ್ರವರಿ 08, 2019
ಮಂಜೇಶ್ವರ: ಕಡಂಬಾರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಶಿಲಾಮಯ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ ನಿರ್ಮಾಣಕ್ಕಾಗಿರುವ ಪ್ರಥಮ ಹಂತದ ಶಿಲಾಕಲ್ಲನ್ನು ಫೆ. 10ರಂದು ಭಾನುವಾರ ಮಧ್ಯಾಹ್ನ 2.ಕ್ಕೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗುವುದು ಎಂದು ಕ್ಷೇತ್ರಾಡಳಿತ ಸಮಿತಿ ಪತ್ರಿಕಾ ಪಕ್ರಟಣೆಯಲ್ಲಿ ತಿಳಿಸಿದೆ. ಮೆರವಣಿಗೆ ಬರುವ ವೇಳೆ ಗ್ರಾಮದ ಎಲ್ಲಾ ಮನೆಯವರು ಪುಷ್ಪ ಸರ್ಮಪಣೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕಾಗಿ ವಿನಂತಿಸಲಾಗಿದೆ.