ಉಪ್ಪಳ: ಸಜಂಕಿಲ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಇಂದು ಸಾಯಂಕಾಲ ನಡೆಯಲಿದೆ.
ಸಂಜೆ 6.45 ಕ್ಕೆ ಆರಂಭಗೊಳ್ಳುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 8 ಗಂಟೆಯಿಂದ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಪೈವಳಿಕೆ ಗ್ರಾ.ಪಂ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪುಷ್ಪಾವತಿ ಮೈಂದಗುಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್.ವಿ, ಬಿ.ಆರ್,ಸಿ ಮಂಜೇಶ್ವರ ಇದರ ವಿಜಯ್ ಕುಮಾರ್, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಇದರ ಎಂ.ಕೇಶವ ರಾವ್, ಮುಖ್ಯ ಅತಿಥಿಗಳಾಗಿರುವರು.ಬಾಯಾರು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿ ಸದಾನಂದ.ಎಂ ಹಾಗೂ ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಜೆ.ಪಿ.ಯಚ್.ಯನ್ ಲಕ್ಷ್ಮೀದೇವಿ ಭಟ್.ವೈ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಾಲಾ ಪ್ರಬಂಧಕ ಕೆ.ಗೋಪಾಲಕೃಷ್ಣ, ಮಾತೃ ಸಂಘದ ಅಧ್ಯಕ್ಷೆ ಚಂದ್ರಿಕಾ ಶುಭಾಶಂಸನೆಗೈಯ್ಯುವರು. ರಾತ್ರಿ 9.15 ರಿಂದ 11.39 ತನಕ ಶಾಲಾ ಮಕ್ಕಳಿಂದ ಪೌರಾಣಿಕ ನಾಟಕ, ವಿವಿಧ ನೃತ್ಯ ಪ್ರಕಾರ ಪ್ರದರ್ಶನ ಏರ್ಪಡಿಸಲಾಗಿದೆ.