ಪೆರಡಾಲದಲ್ಲಿ ವಿಮುಕ್ತಿ ಶಿಬಿರ
0
ಫೆಬ್ರವರಿ 04, 2019
ಕುಂಬಳೆ: ಮಾದಕ ವ್ಯಸನಗಳು ಮಾನವ ಜೀವನದ ಅತೀದೊಡ್ಡ ಶತ್ರು. ಬಾಲ್ಯಕಾಲದಲ್ಲಿಯೇ ಇಂತಹ ವಿಷಯಗಳತ್ತ ತಿರಸ್ಕಾರ ಮನೋಭಾವ ಬೆಳೆಸಿಕೊಂಡು ಸಕಾರಾತ್ಮಕ ಹವ್ಯಾಸಗಳತ್ತ ಮನಸ್ಸು ಹರಿಸಬೇಕು ಎಂದು ಬದಿಯಡ್ಕ ಗ್ರಾಮ ಪಂಚಾಯತಿ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಜೋನ್ ನುಡಿದರು.
ಅವರು ಪೆರಡಾಲ ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ಇತ್ತೀಚೆಗೆ ನಡೆಸಿದ ವಿಮುಕ್ತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಬಕಾರಿ ಅಧಿಕಾರಿ ಪ್ರಭಾಕರನ್ ಹಾಗೂ ಅರುಣ್ ಅವರು ಮಾದಕವಸ್ತು ಬಳಕೆಯ ಅಪಾಯಗಳನ್ನು ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಇಲಾಖೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯತಿ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಂಗವಾಗಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಹಮದ್ ಮಸೂದ್ ಪ್ರಥಮ ಹಾಗೂ ಸಿನಾನ್ ದ್ವಿತೀಯ ಸ್ಥಾನ ಗಳಿಸಿದರು. ಶಿಕ್ಷಕ ಪ್ರಮೋದಕುಮಾರ್ ಸ್ವಾಗತಿಸಿ, ಅಬ್ದುಲ್ ಅಸೀಸ್ ವಂದಿಸಿದರು.