ರತ್ನಗಿರಿಯಲ್ಲಿ ಶಾಶ್ವತ ಪ್ರವೇಶ ದ್ವಾರ ಸಮರ್ಪಣೆ
0
ಫೆಬ್ರವರಿ 28, 2019
ಬದಿಯಡ್ಕ: ನೀರ್ಚಾಲು ಸಮೀಪದ ರತ್ನಗಿರಿ ಕುದ್ರೆಕ್ಕಾಳಿ ಶ್ರೀಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದ ಹಿನ್ನೆಲೆಯಲ್ಲಿ ರತ್ನಗಿರಿಯ ಓಂಕಾರ್ ಫ್ರೆಂಡ್ಸ್ ಕ್ಲಬ್ ವತಿಯಿಂದ ನಿರ್ಮಾಣ ಮಾಡಲಾದ ನೂತನ ಶಾಶ್ವತ ಪ್ರವೇಶ ದ್ವಾರವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಲಾಯಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿಘ್ನೇಶ್ವರ ಭಟ್ ಸೂರಂಬೈಲು ಶಾಶ್ವತ ಪ್ರವೇಶ ದ್ವಾರವನ್ನು ಸಮರ್ಪಿಸಿದರು.