ಥಿಯೋಟಿರಿಕ್ಸ್ ಸೊಸೈಟಿಯ ಕ್ವಾಲಿಡೋಸ್ಕೋಫ್ ಶನಿವಾರ ಕಾಸರಗೋಡಿನಲ್ಲಿ
0
ಫೆಬ್ರವರಿ 06, 2019
ಕಾಸರಗೋಡು: ಸಾಂಬಾ ನೃತ್ಯ ಸಹಿತ ವಿವಿಧ ಕಲಾ ಪ್ರಕಾರಗಳ ಪ್ರದರ್ಶನಗಳೊಂದಿಗೆ ಕಾಸರಗೋಡಿ ಥಿಯೋಟರಿಕ್ಸ್ ಸೊಸೈಟಿ ನೇತೃತ್ವದಲ್ಲಿ ನಡೆಯುತ್ತಿರುವ ತಿಂಗಳಕಾರ್ಯಕ್ರಮದ ಭಾಗವಾಗಿ ಫೆ.9 ರಂದು ಶನಿವಾರ ಸಂಜೆ7 ರಿಂದ ಕಾಸರಗೋಡು ಪುರಭವನದ ಸಂಧ್ಯಾ ರಾಗ ತೆರೆದ ರಂಗವೇದಿಕೆಯಲ್ಲಿ ಕ್ಯಾಲಿಡೋಸ್ಕೋಪ್ 19 ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 7ಕ್ಕೆ ಕಾಸರಗೋಡು ಥಿಯೋಟರಿಕ್ಸ್ ಸೊಸೈಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಮಾರಂಭ ಉದ್ಘಾಟಿಸುವರು. ಉಪಾಧ್ಯಕ್ಷರೂ, ಜಿಲ್ಲಾ ಪೋಲೀಸ್ ವರಿಷ್ಠರೂ ಆಗಿರುವ ಡಾ.ಎ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಖ್ಯಾತ ಗಾಯಕ, ಸವಾಕ್ ಕಾಂಞÂಂಗಾಡ್ ಬ್ಲಾಕ್ ಅಧ್ಯಕ್ಷ ಕಾಂಞÂಂಗಾಡ್ ರಾಮಚಂದ್ರನ್ ಉಪಸ್ಥಿತರಿರುವರು.
ವಿವಿಧ ಕಲಾ ಪ್ರಕಾರಗಳ ಸಂಘಟನೆಯಾದ ಸವಾಕ್ ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ಏರ್ಪಡಿಸಲಾಗಿರುವ ಸಾಂಸ್ಕøತಿಕ ಸಂಜೆಯಲ್ಲಿ ಸೋಪಾನ ಸಂಗೀತ, ಪಾಡ್ದನ ಮೇಳ, ಮೋಹಿನಿಯಾಟ್ಟಂ, ತಿರುವಾದಿರ ನೃತ್ಯ, ತುಳು ಜಾನಪದ ನೃತ್ಯ, ಕಾವಡಿ ಚೆಮಡು, ಕಾವಾಡಿ ನೃತ್ಯ, ಏಕಪಾತ್ರಾಭಿನಯ, ಸಿನಿಮ್ಯಾಟಿಕ್ ಡ್ಯಾನ್ಸ್, ಮಾಪಿಳ್ಳಪ್ಪಾಟ್, ರಂಗಗೀತೆ, ಮಿಮಿಕ್ರಿ ಸಹಿತ ಬ್ರೆಜಿಲ್ ರಾಷ್ಟ್ರದ ವಿಶಿಷ್ಟ ಕಲಾ ಪ್ರಕಾರವಾದ ಸಾಂಬಾ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.