ಕಲ್ಯಾಣ ನಿಧಿ: ದೇವಾಲಯಗಳ ಪಾಲು ಸಂಗ್ರಹ
0
ಫೆಬ್ರವರಿ 28, 2019
ಕಾಸರಗೋಡು: ಮಲಬಾರ್ ದೇವಸ್ವಂ ಮಂಡಳಿ ವ್ಯಾಪ್ತಿಯ ಮಲಬಾರ್ ದೇವಾಲಯ ನೌಕರರ , ಕಾರ್ಯಕಾರಿ ಅಧಿಕಾರಿಗಳ ಕಲ್ಯಾಣನಿಧಿ ದೇವಾಲಯಗಳ ಪಾಲು ಸಂಗ್ರಹ ನಡೆಸಲಾಗುವುದು.
ಮಾ.11ರಂದು ಬೆಳಿಗ್ಗೆ 11 ಗಂಟೆಗೆ ನೀಲೇಶ್ವರ ಶ್ರೀ ಮಂದಪುರತ್ ಕಾವು ಭವಗತಿ ದೇವಾಲಯದಲ್ಲಿ ಕಲ್ಯಾಣನಿಧಿ ಕಾರ್ಯದರ್ಶಿ ಈ ಕುರಿತು ಶಿಬಿರ ನಡೆಸಲಿದ್ದಾರೆ. ಮಲಬಾರ್ ದೇವಸ್ವಂ ಮಂಡಳಿ ವ್ಯಾಪ್ತಿಯ ಕಾಸರಗೋಡು, ಹೊಸದುರ್ಗ ತಾಲೂಕುಗಳ ಮತ್ತು ತಳಪ್ಪರಂಬ ತಾಲೂಕಿನ ದೇವಾಲಯಗಳ ಪದಾಧಿಕಾರಿಗಳು ಕಲ್ಯಾಣನಿಧಿಯಲ್ಲಿ ಪಾವತಿಸಬೇಕಾದ ಮೊಬಲಗನ್ನು ಈ ವೇಳೆ ಸಲ್ಲಿಸಬಹುದು.
ಈ ವೇಳೆ ದೇವಾಲಯ ನೌಕರರು ಕಲ್ಯಾಣ ನಿಧಿಯಲ್ಲಿ ಸದಸ್ಯರಾಗುವ ಅವಕಾಶವನ್ನೂ ಕಲ್ಪಿಸಲಾಗುವುದು. ಇದಕ್ಕಾಗಿ ಗಝೆಟೆಡ್ ಅಧಿಕಾರಿಗಳಿಂದ ದೃಡೀಕರಣ ನಡೆಸಿದ ಜನನ ದಾಖಲೆ ಪತ್ರ, ವೇತನ ದಾಖಲೆ ಪತ್ರ ನಕಲು ಸಹಿತ ಅರ್ಜಿ ಸಲ್ಲಿಸಬಹುದು. ನೌಕರರ ಕಲ್ಗಯಾಣನಿಧಿ ಪಾಲು ಪಾವತಿಗೆ ವೇತನಪಟ್ಟಿಯ ನಕಲನ್ನೂ ಹಾಜರುಪಡಿಸಬೇಕು. ಮಂಡಳೀಯ ಅಂಗೀಕಾರ ಲಭಿಸಿದ ಒಂದು ವರ್ಷದ ಅವಧಿಯಲ್ಲಿ ಕಲ್ಯಾಣನಿಧಿ ಸದಸ್ಯತನಕ್ಕಾಗಿ ಅರ್ಜಿ ಸಲ್ಲಿಸದೇ ಇರುವ ನೌಕರರ ಸದಸ್ಯ ಅಂಗೀಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.