ಗಡಿನಾಡು ಕಾಸರಗೋಡಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಭವನ ನಿರ್ಮಾಣ ಪೂರ್ವಬಾವಿ ಸಭೆ
0
ಫೆಬ್ರವರಿ 04, 2019
ಮಧೂರು: : ಗಡಿನಾಡಿನ ಹಿರಿಯ ಸಂಶೋಧಕ ಸಾಹಿತಿ ದಿವಂಗತ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಭವನ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿರಿಬಾಗಿಲಿನಲ್ಲಿ ಸ್ಥಾಪನೆಗೊಳ್ಳಲಿದ್ದು ಆ ಬಗೆಗಿನ ಭವನನಿರ್ಮಾಣ ಪೂರ್ವ ಸಮಾಲೋಚನಾ ಸಭೆ ಭಾನುವಾರ ವೆಂಕಪ್ಪಯ್ಯರ ಸ್ವಗೃಹ ಯಕ್ಷಾನುಗ್ರಹದಲ್ಲಿ Éಜರಗಿತು.
ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೆಂಕಪ್ಪಯ್ಯರ ಬಂಧುವರ್ಗದವರು ಹಿತೈಷಿಗಳು ಅಭಿಮಾನಿಗಳು ಭಾಗವಹಿಸಿದ್ದರು. ಸಭೆಯ ಸಂಯೋಜನೆ ಹಾಗೂ ನೇತೃತ್ವವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವಹಿಸಿತ್ತು. ಸಭೆಯಲ್ಲಿ ಹಿರಿಯ ಅರ್ಥಧಾರಿ ಪ್ರತಿಷ್ಠಾÀನದ ಅರ್ಥಾಂತರಂU ಸರಣಿ ಕಾರ್ಯಕ್ರಮದ ನಿರ್ದೇಶಕ ರಾಧಾಕೃಷ್ಣ ಕಲ್ಚಾರ್ ಪ್ರತಿಷ್ಠಾನ ಕಾರ್ಯಕ್ರಮಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ ಸಾಂಸ್ಕøತಿಕ ಭವನ ರಚನೆಯ ದ್ಯೇಯೋದ್ಧೇಶಗಳನ್ನು ವಿವರಿಸುತ್ತಾ 'ಸುಮಾರು ಎರಡು ಕೋಟಿವೆಚ್ಚದಲ್ಲಿ ನಿರ್ಮಿಸಲಾಗುವ ಕಲಾ ಭವನದಲ್ಲಿ ಯಕ್ಷಗಾನದ ಸಮಗ್ರ ಅಧ್ಯಯನಕ್ಕಿರುವ ಅನುಕೂಲಗಳನ್ನು ನೀಡಲಾಗುವುದು, ಸುಸಜ್ಜಿತ ಗ್ರಂಥಾಲಯ, ಯಕ್ಷಗಾನ ತರಭೇತಿ ಕೇಂದ್ರ, ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ಪ್ರಯೋಗಕ್ಕೆ ಅವಕಾಶ, ಯಕ್ಷಗಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನಾಲಯ ಒಳಗೊಂಡಿರುತ್ತದೆ' ಎಂದರು.
ಸಭೆಯಲ್ಲಿ ಹಿರಿಯ ಅರ್ಥಧಾರಿ ಪ್ರತಿಷ್ಠಾÀನದ ಅರ್ಥಾಂತರಂU ಸರಣಿ ಕಾರ್ಯಕ್ರಮದ ನಿರ್ದೇಶಕ ರಾಧಾಕೃಷ್ಣ ಕಲ್ಚಾರ್ ಪ್ರತಿಷ್ಠಾನ ಕಾರ್ಯಕ್ರಮಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ರಾದಾಕೃಷ್ಣ ಉಳಿಯತ್ತಡ್ಕ ಅವರು ಸಿರಿಬಾಗಿಲು ವೆಂಕಪ್ಪಯ್ಯರ ಬದುಕು, ಬರಹಗಳ ಬಗ್ಗೆ ಮಾತನಾಡಿ ವೆಂಕಪ್ಪಯ್ಯರ ಹೆಸರನ್ನು ಕಾಸರಗೋಡಿನ ಮಣ್ಣಿನಲ್ಲಿ ಶಾಸ್ವತವಾಗಿಸಬೇಕಾದ ಅಗತ್ಯತೆ, ಬಗ್ಗೆ ಸಭೆಗೆ ವಿವರಿಸಿದರು.
ಸಭೆಯಲ್ಲಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಮಾಲೋಚಿಸಿ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಂತೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಟ್ರಸ್ಟ್‍ಗೆ ಒಟ್ಟು ಏಳುಮಂದಿಯನ್ನು ಸೇರ್ಪಡೆಗೊಳಿಸಿ ಟ್ರಸ್ಟ್‍ನ್ನು ಪುನಃಶ್ಚೇತನಗೊಳಿಸುವುದು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ಗಣ್ಯರನ್ನೊಳಗೊಂಡ ಕಟ್ಟಡ ಸಮಿತಿ ರಚಿಸುವುದು, ನೀಲನಕಾಶೆ ಸಹಿತ ವಿಸ್ತøತ ಮನವಿಪತ್ರವನ್ನು ಸಿದ್ಧಪಡಿಸುವುದು, ತಜ್ಞರಿಂದ ಒಟ್ಟು ಅಂದಾಜು ಲೆಕ್ಕಪತ್ರ ಹಾಗೂ ನಕಾಶೆ ತಯಾರಿಸುವುದು, ದಾನಿಗಳ ಹಾಗೂ ಸರಕಾರದಿಂದ ಅನುದಾನ ದೊರೆಯುವಂತೆ ಯತ್ನಿಸುವುದು ಹಾಗೂ ಆ ಬಗೆಗೆ ಪ್ರಯತ್ನಿಸಲು ಓರ್ವ ಅನುಭವಿ ವ್ಯಕ್ತಿಗೆ ಜವಾಬ್ದಾರಿ ನೀಡುವುದು, ಹಾಗೂ ಈ ಹಿಂದಿನ ಒಟ್ಟು ಚಟುವಟಿಕೆಗಳ ಬಗ್ಗೆ ಒಂದು ಮಾಹಿತಿ ಕೈಪಿಡಿ ಹೊರ ತರುವುದರ ಬಗ್ಗೆ ಸಭೆಯಲ್ಲಿ ಅಗತ್ಯ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕಾರಿ ಸಮಿತಿರಚನೆ :
ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಭವನ ರಚನೆಯ ಉಸ್ತುವಾರಿ ನೋಡಿಕೊಳ್ಳಲು ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು ಅದರಂತೆ ಪ್ರಧಾನ ಸಂಚಾಲಕರಾಗಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕೋಶಾಧಿಕಾರಿಯಾಗಿ ಲಕ್ಷ್ಮೀ ನಾರಾಯಣ ಕಾವು, ಸಹಸಂಚಾಲಕರಾಗಿ ಸತೀಶ ಅಡಪ ಸಂಕಬೈಲು, ಮೋಹನ ಕುಮಾರ್ ಪುಳ್ಕೂರು, ಜಗದೀಶ ಕೂಡ್ಲು, ಜಯರಾಮ ರೈ ಸಿರಿಬಾಗಿಲು, ಜಯರಾಮ ಕಾರಂತ ದೇಶಮಂಗಲ, ಯೋಗೀಶ ರಾವ್ ಚಿಗುರುಪಾದೆ, ಸದಾಶಿವ ಭಟ್ ಎದುರ್ಕಳ, ರಾಧಾಕೃಷ್ಣ ಉಳಿಯತ್ತಡ್ಕ, ಸದಸ್ಯರಾಗಿ ಶಿವರಾಮ ಕಾಸರಗೋಡು, ರಾಧಾಕೃಷ್ಣ ಕಲ್ಚಾರ್, ರಾಧಾಕೃಷ್ಣ ರಾವ್, ಕೆ.ವಿ.ರಮೇಶ್, ತಿಮ್ಮಪ್ಪ ಮಜಲು ಮಹೇಶ್ ಸುಳ್ಯ, ಜಯರಾಮ ದೇವಸ್ಯ, ಬಟ್ಯಪ್ಪ ಶೆಟ್ಟಿ, ಚಂದ್ರ ಶೇಖರ ಹೊಳ್ಳ, ಎಸ.ಎನ್.ರಾಮ ಶೆಟ್ಟಿ, ಡಾ. ಶ್ರುತ ಕೀರ್ತಿರಾಜ, ಗುರುಪ್ರಸಾದ್ ಕೋಟೆಕಣಿ, ಶ್ರೀಕಾಂತ ಕಾಸರಗೋಡು, ಪ್ರದೀಪ್ ಕುಮಾರ್ ಬೇಕಲ್, ವಾಸುದೇವ ಹೊಳ್ಳ ಮಧೂರು, ಶ್ಯಾಮ ಪ್ರಸಾದ ಮಾನ್ಯ, ಉದಯ ಕಂಬಾರು, ಸುಬ್ರಹ್ಮಣ್ಯ ಭಟ್ ಪರುವೋಡಿ, ಮುರಳಿಮಾಧವ ಮಧೂರು, ವೆಂಕಟರಮಣ ಹೊಳ್ಳ ಕಾಸರಗೋಡು, ಯಸ್.ಯನ್,ಮಯ್ಯ ಬದಿಯಡ್ಕ, ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ಅವರನ್ನು ಆರಿಸಲಾಯಿತು.