ಕಾಸರಗೋಡು: ಕಾಸರಗೋಡು ತಾಲೂಕು ಸಪ್ಲೈ ಕಚೇರಿಯಲ್ಲಿ 2018 ಜೂನ್, ಜುಲೈ ತಿಂಗಳಲ್ಲಿ ನೂತನ ಪಡಿತರ ಚೀಟಿ ಲಭ್ಯತೆಗೆ ನೇರವಾಗಿ ಅರ್ಜಿ ಸಲ್ಲಿಸಿದ (ಆನ್‍ಲೈನ್ ಹೊರತಾಗಿ) ಟೋಕನ್ ನಂಬ್ರ 2001 ರಿಂದ 3750 ವರೆಗಿನ ಪಡಿತರ ಚೀಟಿಗಳು ಇಂದಿನಿಂದ ಫೆ.11 ರ ವರೆಗೆ ಕಾಸರಗೋಡು ಸಪ್ಲೈ ಕಚೇರಿಯಲ್ಲಿ ವಿತರಣೆ ನಡೆಸಲಾಗುವುದು.
ಟೋಕನ್ ನಂಬ್ರ 2001 ರಿಂದ 2300 ವರೆಗಿನವರಿಗೆ ಫೆ.4ರಂದು, ಟೋಕನ್ ನಂಬ್ರ 2301ರಿಂದ 2600 ವರೆಗಿನವರಿಗೆ ಫೆ.5ರಂದು, ಟೋಕನ್ ನಂಬ್ರ 2601ರಿಂದ 2900 ವರೆಗಿನವರಿಗೆ ಫೆ.6ರಂದು, ಟೋಕನ್ ನಂಬ್ರ 2901ರಿಂದ 3200 ವರೆಗಿನವರಿಗೆ ಫೆ.7ರಂದು ಫೆ.8ರಂದು, ಟೋಕನ್ ನಂಬ್ರ 3201ರಿಂದ 3500 ವರೆಗಿನವರಿಗೆ ಫೆ.8ರಂದು, ಟೋಕನ್ ನಂಬ್ರ 3501ರಿಂದ 3700 ವರೆಗಿನವರಿಗೆ ಫೆ.11ರಂದು ನೂತನ ಪಡಿತರ ಚೀಟಿ ವಿತರಿಸಲಾಗುವುದು.
ಅರ್ಜಿದಾರರು ಈಗಿರುವ ಅಸಲಿ ಕಾರ್ಡ್, ಟೋಕನ್, ನೂತನ ಕಾರ್ಡ್‍ನ ಮೌಲ್ಯ ಸಹಿತ ನೇರವಾಗಿ ಹಾಜರಾಗಬೇಕು. ಬೆಳಗ್ಗೆ 10.30ರಿಂದ ಸಂಜೆ 3.30ರ ವರೆಗೆ ವಿತರಣೆ ನಡೆಯಲಿದೆ. ಅಕ್ಷಯ ಕೇಂದ್ರ ಮೂಲಕ ರೇಶನ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರ ಪಡಿತರ ಚೀಟಿ ವಿತರಣೆಯ ದಿನಾಂಕ ನಂತರ ತಿಳಿಸಲಾಗುವುದು