ಸುಳ್ಳು ಸುದ್ದಿಗೆ ಬಲಿಯಾಗುವವರ ಪೈಕಿ ಭಾರತೀಯರೇ ಹೆಚ್ಚು: ಮೈಕ್ರೋಸಾಫ್ಟ್ ವರದಿ
0
ಫೆಬ್ರವರಿ 06, 2019
ನವದೆಹಲಿ: ಭಾರತೀಯರು ಜಗತ್ತಿನ ಇತರೆ ರಾಷ್ಟ್ರದವರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸುಳ್ಳು ಸುದ್ದಿಗಳ ಹಾವಳಿಗೆ ಒಳಗಾಗುತ್ತಿದ್ದಾರೆ. ಆನ್ ಲೈನ್ ನಲ್ಲಿ ಬರುವ ಸುಳ್ಳು ಸುದ್ದಿಗಳ ಕಾರಣ ದೇಶದ ಸಾಮಾಜಿಕ ವಲಯದಲ್ಲಿ ಅಪಾಯದ ಮಟ್ಟ ಹೆಚ್ಚುತ್ತಿದೆ ಎಂದು ಜಾಗತಿಕ ಸಮೀಕ್ಷೆಯೊಂದು ಹೇಳಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚಿನ ಕೆಲ ತಿಂಗಳಿನಲ್ಲಿ ಒಟ್ಟಾರೆ 22 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಸರಿಸುಮಾರು ಶೇ. 64ರಷ್ಟು ಭಾರತೀಯರು ಆನ್ ಲೈನ್ ನಲ್ಲಿ ಬರುವ ಸುಳ್ಳು ಸುದ್ದಿಗಳಿಂದ ಪ್ರಭಾವಿತರಾಗುತ್ತಾರೆ ಎಂದು ವರದಿಯಾಗಿದೆ. ಇದೇ ವೇಳೆ ಜಾಗತಿಕವಾಗಿ ಈ ಪ್ರಮಾಣ ಸರಾಸರಿ ಶೇ.57ರಷ್ಟಿದೆ.
ಈ ವೇಳೆ ಇಂಟರ್ನೆಟ್ ವಂಚನೆ ಸಂಬಂಧ ಶೇ .54ರಷ್ಟು ಮಂದಿ ವರದಿ ಂಆಡಿದ್ದು ವಂಚನೆ ಪ್ರಕರಣಗಳಲ್ಲಿ ಸಿಕ್ಕಿಕೊಂಡವರ ಪ್ರಮಾಣ ಶೇ.42ರಷ್ಟಿದೆ.ಇದೇ ವೇಳೆ ಕುತೂಹಲಕಾರಿ ಬೆಳವಣಿಗೆ ಎಂದರೆ ಶೇ.29ರಷ್ಟು ಜನರು ತಮ್ಮ ಕುಟುಂಬ, ಸ್ನೇಹಿತರ ಮೂಲಕವೇ ಆನ್ ಲೈನ್ ಅಪಾಯಗಳನ್ನು ಎದುರಿಸಿದ್ದಾರೆ. ಈ ಪ್ರಮಾಣ ಶೇ .9ರಷ್ಟು ಏರಿಕೆ ದಾಖಲಿಸಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಮಂಗಳವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ.
"ಸಾಮಾಜಿಕ ವಲಯಗಳು ಭಾರತದಲ್ಲಿ ಅಪಾಯಕಾರಿ ಹಂತ ತಲುಪಿದೆ" ಎಂದು ವರದಿ ಉಲ್ಲೇಖಿಸಿದೆ.
ಆನ್ ಲೈನ್ ಅಪಾಯದಿಂದ ವಂಚನೆಗೊಳಗಾಇ ನೋವು ಕಂಡವರ ಪೈಕಿ ಭಾರತೀಯರು ಜಗತ್ತಿನ ಇತರೆ ರಾಷ್ಟ್ರದವರಿಗಿಂತ ಮುಂದಿದ್ದಾರೆ.ಈ ರೀತಿಯಾಗಿ ನೋವುಂಡ ಭಾರತೀಯರ ಪ್ರಮಾಣ ಶೇ.52 ಆಗಿದ್ದರೆ ಜಾಗತಿಕವಾಗಿ ಈ ಸರಾಸರಿ ಶೇ.28 ಮಾತ್ರವೇ ಇದೆ.
ಈ ಅಂಶಗಳನ್ನು ನೋಡಿದರೆ ಆನ್ ಲೈನ್ ಅಪಾಯದ ಕುರಿತು ದೇಶದಲ್ಲಿ ಕಡಿಮೆ ಪ್ರಮಾಣದ ಜಾಗೃತಿ ಮೂಡೆದೆ.ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ದೇಶ ಹಿಂದಿದೆ.ದುರ್ಬಲರು, ಯುವಕರು ಈ ಆನ್ ಅಲಿನ್ ಅಪಾಯಗಳಿಗೆ ಸಿಕ್ಕಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಇದೇ ಸಮುದಾಯ ತಮ್ಮಂತೆ ವಂಚನೆಗೊಳಗಾದ ಇತರರಿಗೆ ಸಹಾಯ ಮಾಡಲು ಮುಂದಾಗುತ್ತದೆ ಎಂದೂ ವರದಿ ಹೇಳಿದೆ.