ಕಾಸರಗೋಡು: ಸಮಾಜನೀತಿ ಇಲಾಖೆ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ಸಂತತ್ರಸ್ತರಿಗೆ ಪ್ರತ್ಯೇಕ ಯೋಜನೆ ಜಾರಿಗೊಳಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ಪಿ.ಕೆ.ಶ್ರೀಮತಿ ಟೀಚರ್ ಭರವಸೆ ನೀಡಿದರು.
ಕಾಞOಗಾಡಿನಲ್ಲಿ ಭಾನುವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ "ಅಮ್ಮ ಮತ್ತು ಮಗು" ಎಂಬ ಹೆಸರಿನ ಆಸ್ಪತ್ರೆಗೆ ಶಿಲಾನ್ಯಾಸ ನಡೆಸಿ, ಬಳಿಕ ಕಾಞÂಂಗಾಡು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಳಿಯಾರಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ ನಿವಾಸ ಕೇಂದ್ರ ಈ ವರ್ಷವೇ ಪೂರ್ತಿಗೊಳ್ಳಲಿದೆ. 6 ಬಡ್ಸ್ ಶಾಲೆಗಳ ಉದ್ಘಾಟನೆ ಈ ವರ್ಷವೇ ನಡೆಯಲಿದೆ ಎಂದವರು ಹೇಳಿದರು.
ಹಿಂದೆ ಎಂಡೋಸಲ್ಫಾನ್ ಸಂತ್ರ್ಸತರ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಈಗ 3 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಮಳೆಗಾಲದ ರೋಗ, ಅಂಟುರೋಗ ಇತ್ಯಾದಿಗಳ ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಸೇನೆಯ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ. 20 ಮನೆಗಳಿಗೆ ಒಂದು ಸೇನೆ, 20 ಅಂಗಡಿಗಳಿಗೆ ಒಂದು ಸೇನೆ ಎಂಬ ರೀತಿ ಇವರನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಇದರ ಫಲ ಕಂಡುಬರಲಿದೆ ಎಂದರು.
ಆದ್ರರ್ಂ ಯೋಜನೆ ಮೂಲಕ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಸುಧಾರಿಸಿದೆ. ಎಲ್ಲ ಪ್ರಾಥಮಿಕ ಕೇಂದ್ರಗಳೂ ಕುಟುಂಬ ಆರೋಗ್ಯ ಕೇಂದ್ರಗಳಾಗಿ ಚಟುವಟಿಕೆಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಯತ್ನಿಸುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಬಡ್ತಿ ಪಡೆದಿವೆ. 22 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶೀಘ್ರದಲ್ಲೇ ಕುಟುಂಬ ಆರೋಗ್ಯ ಕೇಂದ್ರಗಳಾಗಿ ಮಾರ್ಪಡುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಞÂಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಕಾತ್ ಲ್ಯಾಬ್ ಮಂಜೂರು ಮಾಡಲಾಗಿದೆ. ಇದರ ಚಟುವಟಿಕೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಜಾಗದ ಕೊರತೆಯಿದ್ದುದನ್ನು ಈಗಾಗಲೇ ಪರಿಹರಿಸಲಾಗಿದೆ. ಹೆರಿಗೆ ಚಿಕಿತ್ಸೆ ಸಂಬಂಧ "ಲಕ್ಷ್ಯ" ಯೋಜನೆ ಅಂಗವಾಗಿ ಕಾ?ಂಗಾಡ್ ಜಿಲ್ಲಾ ಆಸ್ಪತ್ರೆ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ.ನ ಯೋಜನೆ ಜಾರಿಗೊಳಿಸಲಾಗುವುದು ಎಂದು ನುಡಿದರು.
ಜಿಲ್ಲೆಯ ಆರೋಗ್ಯ ವಲಯದಲ್ಲಿ 114 ಹುದ್ದೆಗಳಲ್ಲಿ ನೇಮಕಕ್ಕೆ ಅನುಮತಿ ನೀಡಲಾಗಿದೆ. ವೈದ್ಯರ ಸಹಿತ 36 ನೂತನ ಹುದ್ದೆಗಳಿಗೆ ನೇಮಕಾತಿ ಈಗಾಗಲೇ ನಡೆದಿದೆ. ಸಮೀಪ ವರ್ಷಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಬೃಹತ್ ಮಟ್ಟದ ಅಭಿವೃದ್ಧಿ ನಡೆದಿವೆ. ಈಗ ಮಾಮೋಗ್ರಾಂ, ಟ್ರೋಮೋಕೇರ್, ಪಾಲಿಯೇಟಿವ್ ಸ್ಪೆಷ್ಯಲ್ ಕೇರ್ ಇತ್ಯಾದಿಗಳ ಚಟುವಟಿಕೆಗಳು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭವಾಗಿದೆ ಎಂದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್, ಕಾ?ಂಗಾಡ್ ನಗರಸಭೆ ಉಪಾಧ್ಯಕ್ಷೆ ಎಸ್.ಸುಲೈಖಾ, ವಿವಿಧ ಕ್ಷೇತ್ರಗಳ ಗಣ್ಯರಾದ ಗೋವಿಂದನ್ ಪಳ್ಳಿಕಾಪಿಲ್, ಕೆ.ಮಹಮ್ಮದ್ ಕುಂ??, ನೌಫಲ್ ಕಾ?ಂಗಾಡ್, ಕುರ್ಯಾಕೋಸ್ ಪ್ಲಾಪರಂಬಿಲ್, ಅಬ್ರಾಹಂ ತೋಣಕ್ಕರ, ಜೋರ್ಜ್ ಪೈನಾಪಳ್ಳಿ, ಬಿನ್ ಟೆಕ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.
ಕಾಞ oಗಾಡು ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಸ್ವಾಗತಿಸಿ, ಜಿಲ್ಲಾ ಪ್ರಭಾರ ವೈದ್ಯಾಧಿಕಾರಿ ಎಂ.ವಿ.ರಾಮದಾಸ್ ವಂದಿಸಿದರು.