ಪಾಣಾರ್ ಕುಳಂನಲ್ಲಿ ನಿರ್ಮಾಣಗೊಳ್ಳಲಿದೆ ಕಾಸ್ರೋಡ್ ಕೆಫೆ : ಗರಿಗೆದರಲಿದೆ ಪ್ರವಾಸೋದ್ಯಮ ಉದ್ಯಾನ
0
ಫೆಬ್ರವರಿ 28, 2019
ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ವಲಯಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ನಾವೀನ್ಯ ನೀಡುವ ನಿಟ್ಟಿನಲ್ಲಿ ರಚಿಸಲಾದ ಯೋಜನೆ ಕಾಸ್ರೋಡ್ ಕೆಫೆ ಚೆಂಗಳ ಗ್ರಾಮಪಂಚಾಯತ್ ನ ಪಾಣಾರ್ ಕುಳಂ ನಲ್ಲೂ ಜಾರಿಗೊಳ್ಳಲಿದೆ.
ಪ್ರವಾಸೋದ್ಯಮ ಉದ್ಯಾನ ಸಹಿತ ಕೇಂದ್ರ ಪಾಣಾರ್ ಕುಳಂ ನಲ್ಲಿ ಈ ನಿಟ್ಟಿನಲ್ಲಿ ಸ್ಥಾಪನೆಗೊಳ್ಳಲಿದೆ. ಕಂದಾಯ ಇಲಾಖೆ ಈ ಯೋಜನೆಗಾಗಿ ಪ್ರವಾಸೋದ್ಯಮಕ ಇಲಾಖೆಗೆ ಹಸ್ತಾಂತರಿಸಿದ 50 ಸೆಂಟ್ಸ್ ಜಾಗದಲ್ಲಿ ಚೆಂಗಳಗ್ರಾಮಪಂಚಾಯತ್ನ ಸಹಾಯದೊಂದಿಗೆ ಪ್ರವಾಸೋದ್ಯಮ ಉದ್ಯಾನ ನಿರ್ಮಾಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಬದಿ ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಮಕ್ಕಳಿಗಾಗಿ ಆಟದ ಮೈದಾನ, ಆಂಫಿ ಥಿಯೇಟರ್ ಸಹಿತದ ಟ್ಯೂರಿಸಂ ಹಟ್ ಇಲ್ಲಿ ಸ್ಥಾಪನೆಗೊಳ್ಳಲಿದೆ. ಪಾಕಿರ್ಂಗ್ ಸೌಲಭ್ಯ, ಶೌಚಾಲಯ ಸೌಲಭ್ಯ, ಹೂದೋಟ, ಕಾಲ್ನಡಿಗೆ ಹಾದಿ, ಮಿನಿಮಾಸ್, ಮಕ್ಕಳಮನರಂಜನಾ ಸಾಮಾಗ್ರಿಗಳು ಇತ್ಯಾದಿ ಈ ಉದ್ಯಾನ ಯೋಜನೆಯಲ್ಲಿಅಳವಡಗೊಂಡಿದೆ ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಎಂಪಾನಲ್ಡ್ ಆರ್ಕಿಟೆಕ್ಟ್ ಪಿ.ಸಿ.ರಶೀದ್ ಅವರು ಸಿದ್ಧಪಡಿಸಿದ ಯೋಜನೆ ಪ್ರಕಾರ ನಿರ್ಮಿತಿ ಕೇಂದ್ರ ಈ ಕಾಮಗಾರಿ ನಡೆಸುತ್ತಿದೆ. 1.53 ಕೋಟಿ ರೂ. ವೆಚ್ಚ ನೀರಿಕ್ಷಿಸಲಾಗುತ್ತಿದ್ದು, ಜಿಲ್ಲಾ ಪಂಚಾಯತ್ 25 ಲಕ್ಷ ರೂ., ಚೆಂಗಳಗ್ರಾಮಪಂಚಾಯತ್ 25 ಲಕ್ಷ ರೂ., ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಮಂಜೂರುಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಪ್ರವಾಸೋದ್ಯಮ ಇಲಾಖೆ 98 ಲಕ್ಷ ರೂ. ನೀಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅವರು ನುಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಸೇಷ ಕಾಳಜಿಯೊಂದಿಗೆ ಜಾರಿಗೊಳಿಸುವ "ಕಾಸ್ರೋಡ್ ಕೆಫೆ" ಯೋಜನೆಯನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅನುಷ್ಠಾನಕ್ಕೆ ತರುತ್ತಿದ್ದು, ಮೊದಲ ಸಂಸ್ಥೆ ತಲಪ್ಪಾಡಿಯಲ್ಲಿ ಕೆಲವೇ ದಿನಗಳ ಹಿಂದೆ ಉದ್ಘಾಟನೆಗೊಂಡಿದೆ. ಕುಂಬಳೆ, ಬಟ್ಟತ್ತೂರು, ಪೆರಿಯ, ಚೆಮ್ಮಟ್ಟಂವಯಲ್, ಕಲಿಕಡವು ಪ್ರದೇಶಗಳಲ್ಲೂ ಕೆಫೆ ನಿರ್ಮಾಣಗೊಳಿಸುವ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಮುಂದಿನ 6 ತಿಂಗಳಲ್ಲಿ ಇವು ಚಟುವಟಿಕೆ ಆರಂಭಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹೆದ್ದಾರಿಗಳ ಮೂಲಕ ಸಾಗುವ ಪ್ರಯಾಣಿಕರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ, ಪಾನೀಯ ನಿಡಿಕೆ, ವಿಶ್ರಾಂತಿಗೆ ವ್ಯವಸ್ಥೆ ಒದಗಿಸುವಿಕೆ ಇಲ್ಲಿನ ಪ್ರಧಾನ ಉದ್ದೇಶ. ಲಘು ಉಪಹಾರ, ವಿಶ್ರಾಂತಿ ಕೊಡಿ, ಶೌಚಾಲಯ ಸಹಿತದ ಯೂನಿಟ್ ಗಳಲ್ಲಿ ಉತ್ತಮ ಪರಿಣತಿ ಪಡೆದ ಸಮವಸ್ತ್ರಧಾರಿ ಸಿಬ್ಬಂದಿ ಸೇವೆ ನೀಡಲಿದ್ದಾರೆ. ರೆಸ್ಟಾರೆಂಟ್ ನಡೆಸಿ ಅನುಭವಹೊಂದಿರುವ ಮಂದಿಗೆ ಕರಾರು ಮೇರೆಗೆ ಈ ಯೂನಿಟ್ ನಡೆಸಲು ಹೊಣೆ ನೀಡಲಾಗುತ್ತದೆ. ಜೊತೆಗೆ ಇವುಗಳ ಚಟುವಟಿಕೆಗಳ ಮೇಲೆ ಡಿ.ಟಿ.ಪಿ.ಸಿ. ನಿಗಾ ಇರಿಸಲಿದೆ.