ಕುಂಬಳೆ: ಗುರುವಾರ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಅವರಿಂದ ಮಂಡಿಸಲ್ಪಟ್ಟ ಪ್ರಸ್ತುತ ಸಾಲಿನ ರಾಜ್ಯ ಮುಂಗಡಪತ್ರ ಮಂಜೇಶ್ವರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಮಂಜೇಶ್ವರ ಮಂಡಲ ಬಿಜೆಪಿ ಸಮಿತಿ ಪ್ರತಿಕ್ರೀಯಿಸಿದೆ.
ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ, ತುಳು ಅಕಾಡೆಮಿ ಗಳನ್ನು ಅವಗಣಿಸಲಾಗಿದೆ, ಅಡಿಕೆ ಕೃಷಿಕರಿಗೆ,ಗಡಿನಾಡ ಕನ್ನಡಿಗರಿಗೆ ,ಎಂಡೋ ಪೀಡಿತರಿಗೆ ಪ್ರತ್ಯೇಕ ಸವಲತ್ತುಗಳನ್ನು ನೀಡಿಲ್ಲ. ಮನೆಗಳಿಗೆ,ವಾಹನಗಳಿಗೆ ಅಧಿಕ ತೆರಿಗೆ ಜನಸಾಮಾನ್ಯರಿಗೆ ಹೊರೆಯಾಗಲಿದೆ, ಆಧುನಿಕ ಯುಗದಲ್ಲಿಯೂ ಮದ್ಯ, ಲಾಟರಿ ಕೇರಳದ ಆದಾಯದ ಮೂಲ ಎನ್ನುವುದು ನಾಡಿಗೆ ಅವಮಾನ ಎಂದು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದರ್ಶ ಬಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.