ಉಜಾರು ಬ್ರಹ್ಮಕಲಶೋತ್ಸವದಲ್ಲಿ ಸಾಧಕರಿಗೆ ಸನ್ಮಾನ
0
ಫೆಬ್ರವರಿ 28, 2019
ಕುಂಬಳೆ: ಬಂಬ್ರಾಣ ಕೆಳಗಿನ ಉಜಾರು ಧರ್ಮದೈವಗಳ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭ ಸಾಧಕ ಶ್ರೇಷ್ಠರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿ, ಹೋಂಡಾ ದ್ವಿಚಕ್ರ ವಾಹನ ರೇಸ್‍ನ ರಾಷ್ಟ್ರೀಯ ಚಾಂಫಿಯನ್ ಅನೀಶ್ ಶೆಟ್ಟಿ ಅವರುಗಳನ್ನು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ನ್ಯಾಯವಾದಿ ಸುಬ್ಬಯ್ಯ ರೈ, ಡಾ.ಆಶಾ ಜ್ಯೋತಿ ರೈ, ಬ್ರಹ್ಮಶ್ರೀ ಯೋಗೀಶ ಕಡಮಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.