ಎಡನೀರು ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ
0
ಫೆಬ್ರವರಿ 08, 2019
ಬದಿಯಡ್ಕ: ಶ್ರೀಮದ್ ಎಡನೀರು ಮಠದ ಎಡನೀರು ಶ್ರೀವಿಷ್ಣುಮಂಗಲ ದೇವಾಲಯದವಾರ್ಷಿಕೋತ್ಸವ ಫೆ.13 ರಿಂದ 17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಫೆ.13 ರಂದು ಬೆಳಿಗ್ಗೆ 10 ರಿಂದ ಧ್ವಜಾರೋಹಣ, ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ 6 ರಿಂದ ದೀಪೋತ್ಸವ ನಡೆಯಲಿದೆ.
ಫೆ.14 ರಂದು ಬೆಳಿಗ್ಗೆ 9 ರಿಂದ ಶ್ರೀಭೂತಬಲಿ, ಸಂಜೆ 6ರಿಂದ ದೀಪೋತ್ಸವ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ವಿದ್ವಾನ್ ಟಿ.ಪಿ.ಶ್ರೀನಿವಾಸ್ ಕಾಂಞÂಂಗಾಡ್ ಹಾಗೂ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಲಾಗಿದೆ.
ಫೆ.15 ರಂದು ಸಂಜೆ 6.30ರಿಂದ ಮುಂಬೈಯ ಶ್ರೀರಾಜರಾಜೇಶ್ವರಿ ಕಲಾ ಮಂಡಳಿಯವರಿಂದ ಕಲೈಮಾಣಿ ಗುರು ಕೆ.ಕಲ್ಯಾಣ ಸುಂದರಂ ಮುಂಬೈ ಅವರ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಫೆ.16 ರಂದು ರಾತ್ರಿ 7 ರಿಂದ ವಡಗರ ಪುರುವೇರಿಯ ಸೂರ್ಯಗಾಯತ್ರೀ ಮತ್ತು ಬಳಗದವರಿಂದ ದೇವರ ನಾಮಗಳ ಹಾಡುಗಾರಿಕೆ ನಡೆಯಲಿದೆ. ಫೆ.17 ರಂದು ರಾತ್ರಿ 7 ರಿಂದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ. ವಿದ್ವಾನ್ ಟಿ.ಜಿ.ಗೋಪಾಲಕೃಷ್ಣನ್(ವಯಲಿನ್), ವಿದ್ವಾನ್.ಎಂ.ಕೆ.ಪ್ರಾಣೇಶ್ ಬೆಂಗಳೂರು(ಕೊಳಲು), ವಿದ್ವಾನ್.ನಿಶ್ಚಿತ್ ಪುತ್ತೂರು(ಮೃದಂಗ), ವಿದ್ವಾನ್.ಜಗದೀಶ್ ಕುರ್ತಕೋಟಿ(ತಬ್ಲಾ), ವಿದ್ವಾನ್.ದೇವರಾಜ ಹೊಸಬೆಟ್ಟು(ಮೆಂಡೋಲಿನ್), ವಿದ್ವಾನ್.ಅನಿರುದ್ದ ಲಕ್ಷ್ಮೀಶ ಭಟ್ ಮುಂಬೈ(ಮೋರ್ಸಿಂಗ್)ನಲ್ಲಿ ಸಹಕರಿಸುವರು. ಪ್ರತಿನಿತ್ಯ ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ಚೆಂಡೆವಾದನ, ಕಲ್ಲಡ್ಕ ಶಿಲ್ಪಾ ಬೊಂಬೆ ಬಳಗದ ಕೀಲುಕುದುರೆ ನೃತ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ.