ಅರ್ಜಿ ಆಹ್ವಾನ
0
ಫೆಬ್ರವರಿ 06, 2019
ಮಧೂರು: ಮಧೂರು ಕೃಷಿ ಭವನ ಮೂಲಕ ಜಾರಿಗೊಳಿಸುವ ವಿವಿಧ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ. ತೆಂಗಿನ ಕೃಷಿಗೆ ಜೈವಿಕ ಗೊಬ್ಬರ ವಿತರಣೆ, ಅಡಕೆ ಕೃಷಿಗೆ ಕೋಪ್ಪರ್ ಸಲ್ಪೇಟ್ ಮತ್ತು ಜೈವಿಕ ಗೊಬ್ಬರ ವಿತರಣೆ, ತರಕಾರಿ ಕೃಷಿಗೆ ಬೀಜ, ಕೂಲಿ ವೆಚ್ಚ, ಭತ್ತದ ಬೀಜ ಮತ್ತು ಕೂಲಿ ವೆಚ್ಚ, ತರಕಾರಿ-ತಾರಸಿ ಗ್ರೋ ಬ್ಯಾಗ್ ಇತ್ಯಾದಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ಜೊತೆಗೆ 2018-19ರ ತೆರಿಗೆ ರಶೀದಿ ನಕಲು, ಬ್ಯಾಂಕ್ ಪಾಸ್ ಪುಸ್ತಕ ನಕಲು, ಆಧಾರ್ ಕಾರ್ಡ್ ನಕಲು ಇತ್ಯಾದಿ ಸಹಿತ ಪೆ.13ರ ಮುಂಚಿತವಾಗಿ ಮಧೂರು ಕೃಷಿ ಭವನಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.