ಕಾಸರಗೋಡು: ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಸಾಧ್ಯತೆಗಳ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ `ಉನ್ನತ ಶಿಕ್ಷಣ ಸಾಧ್ಯತೆಗಳಿಗೆ ದಿಕ್ಸೂಚಿ' ಎಂಬ ಹೊತ್ತಗೆ ಪ್ರಕಟಿಸಲಾಗಿದೆ.
ಕರುತ್(ಸಾಮಥ್ರ್ಯ) ಯೋಜನೆಯ ಅಂಗವಾಗಿ ಪಿಲಿಕೋಡ್ ಸಿ.ಕೃಷ್ಣನ್ ಸ್ಮಾರಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ವತಿಯಿಂದ ಪುಸ್ತಕ ಪ್ರಕಟಿಸಲಾಗಿದೆ.
ಕಾಲಿಕಡವು ಕರಕ್ಕಾವ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರೀಯ ವಿವಿ ಉಪಕುಲಪತಿ ಡಾ.ಜಿ.ಗೋಪಕುಮಾರ್ ಪುಸ್ತಕ ಬಿಡುಗಡೆಗೊಳಿಸಿದರು. ಕರಿಯರ್ ಗೈಡೆನ್ಸ್ ಆ್ಯಂಡ್ ಅಡೋಲೆಂಟ್ ಕೌನ್ಸಿಲಿಂಗ್ ಸೆಲ್ ವಿಭಾಗ ರಾಜ್ಯ ಸಂಚಾಲಕ ಡಾ.ಸಿ.ಎಂ.ಅಸಿಂ ಅವರಿಗೆ ಪುಸ್ತಕ ಹಸ್ತಾಂತರಿಸಿದರು.
ವಿಜ್ಞಾನ ಮತ್ತು ಸಾಮಥ್ರ್ಯ ಸಾಧ್ಯತೆಗಳಿಗನುಸರಿಸಿ ಹೈಯರ್ ಸೆಕೆಂಡರಿ ಶಿಕ್ಷಣ ನಂತರ ಪ್ರತಿ ವಿದ್ಯಾರ್ಥಿ ಆಸಕ್ತಿಯಿರುವ ತರಬೇತಿ ಆಯ್ಕೆ ಮಾಡಲು ಸಿದ್ಧಗೊಳಿಸುವ ನಿಟ್ಟಿನಲ್ಲಿ ಈ ಪುಸ್ತಕ ಸಿದ್ಧಪಡಿಸಲಾಗಿದೆ. ಶಾಲೆಯ ಸುಮಾರು 480 ಮಕ್ಕಳಿಗೆ ಈ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಕರಿಯರ್ ಪ್ಲಾನಿಂಗ್, ಸಾರ್ವಜನಿಕ ವಿಭಾಗ, ವಿಜ್ಞಾನÀ, ವಾಣಿಜ್ಯ, ಮಾನವಿಕ ಎಂಬ ವಲಯಗಳಲ್ಲಿ ಅಧ್ಯಾಯಗಳನ್ನು ರಚಿಸಲಾಗಿದೆ.
ಶಾಲಾ ಪ್ರಾಂಶುಪಾಲ ಎಂ.ಕೆ.ರಾಜಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಯಜ್ಞದ ರಾಜ್ಯ ಪ್ರತಿನಿಧಿ ಡಾ.ಸಿ.ರಾಮಕೃಷ್ಣನ್ ಕರುತ್ ಯೋಜನೆಯ ಚಟುವಟಿಕೆಗಳ ಕುರಿತು ನಡೆಸಿದ ದಾಖಲೀಕರಣವನ್ನು ಬಿಡುಗಡೆಗೊಳಿಸಿದರು. ಹೈಯರ್ ಸೆಕೆಂಡರಿ ಜಿಲ್ಲಾ ಸಂಚಾಲಕ ಕೆ.ಡಿ.ಮ್ಯಾಥ್ಯೂ, ಶಾಲೆಯ ಮುಖ್ಯಶಿಕ್ಷಕ ಎ.ಎಸ್.ಎ.ಶೆರೂಲ್, ಸ್ಟಾಫ್ ಕಾರ್ಯದರ್ಶಿ ಕೆ.ಪ್ರಕಾಶನ್, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಪಿ.ಸುಧಾಕರನ್, ಮಾತೃ ಸಂಘ ಅಧ್ಯಕ್ಷೆ ಪಿ.ಶೀಜಾ ಉಪಸ್ಥಿತರಿದ್ದರು.