HEALTH TIPS

ನೆಂಪು ಪುಟ್ಟಾಯಿನ ತೂಪರಿಕೆಲು ಕೇರಳ ತುಳುಭವನ ಶಿಲಾನ್ಯಾಸ ಸಮಾರಂಭ: ಗಮನ ಸೆಳೆದ ಪ್ರದರ್ಶನಗಳು

ಮಂಜೇಶ್ವರ: ಕೇರಳ ತುಳು ಅಕಾಡೆಮಿಗಾಗಿ ಮಂಜೇಶ್ವರದ ಕಡಂಬಾರು ದುರ್ಗಿಪಳ್ಳದಲ್ಲಿ ನಿರ್ಮಿಸಲಾಗುವ ತುಳುಭವನಕ್ಕೆ ಬುಧವಾರ ಸಂಜೆ ನಡೆದ ಶಿಲಾನ್ಯಾಸ ಅಂಗವಾಗಿ ಪ್ರಸ್ತುತಗೊಂಡ ಪ್ರದರ್ಶನಗಳು ಗಮನಸೆಳೆದುವು. ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಅಂಗವಾಗಿ ನಡೆಯುವ ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಶಿಲಾನ್ಯಾಸ ನಡೆದಿತ್ತು. ಇದರ ಸಲುವಾಗಿ ನಡೆದ ಸಾಂಸ್ಕೃತಿಕ ಕಾರ್ಯಗಳು, ಸನಾತನ ವಸ್ತು ಪ್ರದರ್ಶನಾಲಯಗಳು, ತುಳು ಪುಸ್ತಕ ಪ್ರದರ್ಶನ ಜನಮನ ಗೆದ್ದಿದೆ. ತುಳು ರಂಗೀತೊದ ಲೇಸ್ ಎಂಬ ಹೆಸರಿನಲ್ಲಿ ಬೇರೆ ಬೇರೆ ತಂಡಗಳು ಜಾನಪದ ಸತ್ವ, ಕಲಾವಂತಿಕೆ ಮೆರೆಯುವ ಪ್ರದರ್ಶನಗಳನ್ನು ನೀಡಿದುವು. ಬೊಳಿಕೆ ಜಾನಪದ ಕಲಾತಂಡ ಕನ್ನೆಪ್ಪಾಡಿ ಇವರಿಂದ ನಡೆದ "ಪಾಡ್ದನ ನಲಿಕೆ ಮೇಳ' ವಿಭಿನ್ನತೆಯಿಂದ ಗಮನ ಸೆಳೆಯಿತು. ಕಲಾವಿದ ಶಂಕರ ಸ್ವಾಮಿ ಕೃಪಾ ಅವರ ನೇತೃತ್ವದ ತಂಡ ದುಡಿ ಪಾಡ್ದನ, ಪ್ರಕೃತಿ ಆರಾಧನೆ, ನೇಜಿ ಪಾಡ್ದನ, ಪಿಲಿ-ಪಂಜಿ ಪಾಡ್ದನ ಇತ್ಯಾದಿ ಪ್ರದರ್ಶನ ನಡೆಸಿದರು. ಕುಟುಂಬಶ್ರೀ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ಕಲಾವಿದರ ತಂಡ, ಮಕ್ಕಳ ತಂಡ ಮೊದಲಾದುವುಗಳಿಂದ ವೈವಿಧ್ಯಮಯ ಕಲಾಪ್ರಸ್ತುತಿಗಳು ನಡೆದುವು. ಸಮಾರಂಭ ಅಂಗವಾಗಿ ಬಾ.ವಿ.ಸುರೇಶ್ ಮತ್ತು ರಾಮಕೃಷ್ಣ ಆಚಾರ್ಯ ಅವರಿಂದ ಸನಾತನ ನಿತ್ಯ ಬಳಕೆಯ ವಸ್ತುಗಳ ಪ್ರದರ್ಶನ ಮಳಿಗೆಗಳು ಗಮನ ಸೆಳೆದುವು. ಇಂದಿನ ತಲೆಮಾರಿಗೆ ಅರಿವೇ ಇಲ್ಲದ ಅನೇಕ ಹಳೆಯ ಸಾಮಾಗ್ರಿಗಳು ಇಲ್ಲಿ ಕುತೂಹಲಕ್ಕೆ ಕಾರಣವಾದುವು. ಬಾಣಂತಿಗೆ ಸ್ನಾನ ಮಾಡಿಸಲು ಬಳಸುವ ಗೆರಟೆಯ ಸೌಟನ್ನು ಹೋಲುವ ದೊಡ್ಡ ಗಾತ್ರದ ಒರುಂಬು, ನೀರೆತ್ತುವ ಏತ, ನೇಗಿಲು, ಮರದಿಂದ ನಿರ್ಮಿಸಿದ ಸೇಮಿಗೆ ಯಂತ್ರಗಳು, ಚಕ್ಕುಲಿ ನಿರ್ಮಾಣ ಯಂತ್ರಗಳು, ಹಳೆಯ ಟೈಪ್ ರೈಟರ್ ಗಳು, ರೇಡಿಯೋ, ಚಾಪೆ ಇತ್ಯಾದಿ ಕುತೂಹಲ ಮೂಡಿಸಿದುವು. ಜೊತೆಯಲ್ಲಿ ಬಾ.ವಿ.ಸುರೇಶ್ ಅವರ ಬಳಿ 14 ಭಾಷೆಗಳ ಮೂಲ ಲಿಪಿಯ ಪ್ರದರ್ಶನವೂ ಸಂಶೋಧನೆ ಕುತೂಹಲಿಗಳಿಗೆ ಆಹಾರ ಒದಗಿಸಿದೆ. ಪುಸ್ತಕ ಪ್ರದರ್ಶನದಲ್ಲಿ ತುಳು ಅಭಿಮಾನಿಗಳಿಗೆ ಬೇಕಾದ ಅನೇಕ ತುಳು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಸಮಾರಂಭ ಅಂಗವಾಗಿ ಮಾಜಿ ಶಾಸಕ ನ್ಯಾಯವಾದಿ.ಸಿ.ಎಚ್.ಕುಂಞÂಂಬು ವಸ್ತುಪ್ರದರ್ಶನಗಳನ್ನು ಉದ್ಘಾಟಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರಿಗೆ ನೇಗಿಲನ್ನು ನೀಡಿ ಅವರು ಮಳಿಗೆಗಗಳಿಗೆ ಚಾಲನೆ ನೀಡಿದರು. ತಹಸೀಲ್ದಾರ್ ಜಾನ್ ವರ್ಗೀಸ್ ಪಿ., ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕೆ.ಆರ್.ಜಯಾನಂದ, ಅಡೂರು ಉಮೇಶ್ ನಾೈಕ್, ಜಯರಾಮ ಮಂಜತ್ತಾಯ ಎಡನೀರು, ಎಂ.ಶಂಕರ ರೈ ಮಾಸ್ತರ್, ಎಸ್.ವಿ.ಭಟ್ ಮೊದಲಾದವರು ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries