HEALTH TIPS

ಸವಾಲನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಾಂಸ್ಕøತಿಕ ಶ್ರೀಮಂತಿಕೆಯ ಸಮಾಜದಿಂದ ಸುಲಭ-ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್ ಗಡಿನಾಡ ಜನಪದ ಕಲಾ ಉತ್ಸವ ಉದ್ಘಾಟಿಸಿ ಅಭಿಮತ

ಮಂಜೇಶ್ವರ: ಗಡಿನಾಡು ಕಾಸರಗೋಡು ಬಹುಸಂಸ್ಕøತಿಗಳ ತವರು ನೆಲೆಯಾಗಿ ಸಂಗಮ ಕಾಶಿಯಾಗಿ ಗುರುತಿಸಿಕೊಂಡಿದೆ. ಸಾಮಾಜಿಕ, ಸಾಂಸ್ಕøತಿಕವಾಗಿ ಒಗ್ಗೂಡಿಸುವ, ಸೌಹಾರ್ಧತೆ-ಸಂತಸಗಳ ಸೇತುವಾಗಿ ಜಾನಪದ ಕಲೆ, ಕಲಾವಿದರುಗಳ ಶ್ರಮಗಳು ಅಗಣಿತ ಕೊಡುಗೆಯನ್ನು ಸಾಮಾಜಿಕ ಶ್ರೇಯಸ್ಸಿಗೆ ನೀಡುತ್ತಿದೆ ಎಂದು ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್ ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ಮಂಜೇಶ್ವರ ಸಿರಿಗನ್ನಡ ಅಭಿಮಾನಿಗಳ ಸಂಘ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಜಂಟಿ ಆಶ್ರಯದಲ್ಲಿ ಗುರುವಾರ ಸಂಜೆ ಆಯೋಜಿಸಲಾದ "ಗಡಿನಾಡ ಜನಪದ ಕಲಾ ಉತ್ಸವ" ವನ್ನು ತಮಟೆ ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕಲೆ ಮತ್ತು ಸಾಂಸ್ಕøತಿಕ ಇತರ ಪ್ರಕಾರಗಳ ಮೂಲಕ ಸಾಮಾಜಿಕ ಜಾಗೃತಿ ಸಾಧ್ಯವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಅತಿವೃಷ್ಠಿ ಹಾಗೂ ನೆರೆಯಿಂದ ತೀವ್ರ ತತ್ತರಗೊಂಡಿದ್ದಾಗಲೂ ಸವಾಲನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಇಲ್ಲಿಯ ಜಾಗೃತ ಸಮಾಜ ಕೈ ಜೋಡಿಸಿರುವುದು ಏಕತೆಯ ಮನೋಬಲದಿಂದಾಗಿದೆ. ಇಂದಿನ ಸ್ಥಿತ್ಯಂತರದ ಒಟ್ಟು ವ್ಯವಸ್ಥೆಯ ಮಧ್ಯೆ ಮಾನವೀಯತೆ, ಪ್ರೀತಿ ಹಾಗÉನಪುಗಳ ಕಾರ್ಯಕ್ರಮವನ್ನು ನಲ್ಲಿ ಸಮರೋಪಾದಿಯ ಚಟುವಟಿಕೆಗಳ ಅಗತ್ಯ ಇದೆ ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಆಯೋಜಿಸಲಾದ ಜನಪದ ಕಲೋತ್ಸವವು ಪರಿಣಾಮಕಾರಿ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಗಿಳಿವಿಂಡಿನ ಕಾರ್ಯದರ್ಶಿ ಕೆ.ಆರ್.ಜಯಾನಂದ ಅವರು ಮಾತನಾಡಿ, ಅಂತರಾಳದ ಪರಿವರ್ತನೆಗೆ ಕಾರಣವಾಗುವ ಕಲೆಗಳನ್ನು ಪ್ರೋತ್ಸಾಹಿಸುವ, ಉಳಿಸಿ ಬೆಳೆಸುವ ಕರ್ತವ್ಯದಿಂದ ವಿಮುಖರಾಗುವುದು ವ್ಯಾಪಕ ನಾಶಕ್ಕೆ ಕಾರಣವಾಗುವುದು. ವೈವಿಧ್ಯಮಯ ಭಾರತೀಯ ಸಾಂಸ್ಕøತಿಕ ಪರಂಪರೆಯ ಪ್ರಸರಿಸುವಿಕೆಯು ಸಮಗ್ರ ಅಭಿವೃದ್ದಿಯ ಮೈಲುಗಲ್ಲಾಗಿ ಬೆಳವಣಿಗೆಗೆ ಪೂರಕವಾಗುವುದು ಎಂದು ತಿಳಿಸಿದರು. ರಾಷ್ಟ್ರಕವಿ ಗೋವಿಂದ ಪೈಗಳ ತಾತನವರಾದ ದಿ. ಸಾಹುಕಾರ್ ಮಂಜೇಶ್ವರ ನಾರಾಯಣ ಪೈ ಅವರು ಕರಾವಳಿಯಲ್ಲೇ ಮೊತ್ತಮೊದಲ ಬಾರಿಗೆ ಸಹ ಭೋಜನ ಕ್ರಾಂತಿಯನ್ನು 150 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಕ್ರಾಂತಿಯ ಕಾರ್ಯಕ್ರಮವನ್ನು ಗಿಳಿವಿಂಡು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು,ರಾ.ಕವಿ ಗಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಕಮಲಾಕ್ಷ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಬೆಂಗಳೂರು ಜಾನಪದ ಕಲಾ ತಂಡದ ಕೆ.ನಾಗರಾಜು ಸ್ವಾಗತಿಸಿ, ಶಿವಮ್ಮ ವಂದಿಸಿದರು. ಡಿ.ದೇವರಾಜ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಚಿಂತಾಮಣಿಯ ಗಾಯತ್ರಿ ತಂಡದಿಂದ ಸಮೂಹ ಜಾನಪದ ನೃತ್ಯ, ಹೊಸಕೋಟೆಯ ರಶ್ಮಿ ವಿ. ತಂಡದಿಂದ ಸಮೂಹ ಶಾಸ್ತ್ರೀಯ ನೃತ್ಯ, ಬೆಂಗಳೂರಿನ ಸುಜಾತಾ ತಂಡದಿಂದ ಸುಗಮ ಸಂಗೀತ, ಕೆ.ನಾಗರಾಜ್ ತಂಡದಿಂದ ಅವ್ವ ಸಾಮಾಜಿಕ ನಾಟಕ, ,.ದೇವರಾಜ್ ತಂಡದಿಂದ ರಂಗಗೀತೆಗಳು, ಗೊಂಬೆಯಾಟ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries