ನಾಳೆ ಗಡಿನಾಡ ಜನಪದ ಕಲಾ ಉತ್ಸವ
0
ಫೆಬ್ರವರಿ 05, 2019
ಮಂಜೇಶ್ವರ: ಗಡಿನಾಡ ಜನಪದ ಕಲಾ ಉತ್ಸವ ಕಾರ್ಯಕ್ರಮ ನಾಳೆ(ಫೆ.7) ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ನಡೆಯಲಿದೆ.
ಮಂಜೇಶ್ವರ ಸಿರಿಗನ್ನಡ ಅಭಿಮಾನಿಗಳ ಸಂಘ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಜಂಟಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ, ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ, ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಚಿಂತಾಮಣಿಯ ಗಾಯತ್ರಿ ತಂಡದಿಂದ ಸಮೂಹ ಜಾನಪದ ನೃತ್ಯ, ಹೊಸಕೋಟೆಯ ರಶ್ಮಿ ವಿ.ತಂಡದಿಂದ ಸಮೂಹ ಶಾಸ್ತ್ರೀಯ ನೃತ್ಯ,ಬೆಂಗಳೂರಿನ ಸುಜಾತಾ ತಂಡದಿಂದ ಸುಗಮ ಸಂಗೀತ, ಕೆ.ನಾಗರಾಜ್ ತಂಡದಿಂದ ಅವ್ವ ಸಾಮಾಜಿಕ ನಾಟಕ, ಡಿ.ದೇವರಾಜ್ ತಂಡದಿಂದ ರಂಗಗೀತೆಗಳು ನಡೆಯಲಿವೆ.