ಡಾನ್ ' ವಿಕಿ ಪೇಜ್ ನಲ್ಲಿ ಭಾರತದ ಹುತಾತ್ಮ ಯೋಧರಿಗೆ ಗೌರವ : ಕೇರಳ ಹ್ಯಾಂಕರ್ಸ್ ಗಳಿಗೆ ಬೆಚ್ಚಿದ 'ಪಾಪಿಸ್ತಾನ'
0
ಫೆಬ್ರವರಿ 26, 2019
ನವದೆಹಲಿ:ಮಧ್ಯಪ್ರದೇಶದಿಂದ ಟೋಮೊಟೋ ಪೂರೈಸದಿದ್ದರೆ ಅಣು ಬಾಂಬ್ ಮೂಲಕ ಉತ್ತರ ನೀಡುತ್ತೇವೆ ಎಂದಿದ್ದ ಪಾಕಿಸ್ತಾನದ ಪತ್ರಕರ್ತರಿಗೆ ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದ್ದಾರೆ ಕೇರಳದ ಹ್ಯಾಂಕರ್ಸ್ ಗಳು.
ಪಾಕಿಸ್ತಾನದ ಜನಪ್ರಿಯ ದಿನ ಪತ್ರಿಕೆ ಡಾನ್ ವಿಕಿ ಪೇಜ್ ಟಾರ್ಗೆಟ್ ಮಾಡಿರುವ ಕೇರಳದ ಹ್ಯಾಂಕರ್ಸ್ ಗಳು ಆ ಪೇಜ್ ಎಡಿಟ್ ಮಾಡಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತದ ಸಿಆರ್ ಪಿಎಫ್ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಮಲ್ಲುಆಪ್ಸ್ ಎಂದು ತಮ್ಮನ್ನು ಪರಿಚಯಿಸಿಕೊಂಡಿರುವ ಹ್ಯಾಂಕರ್ಸ್ ಗಳು, ಕರಾಚಿ ಮೂಲದ ಪತ್ರಿಕೆಯ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಬದಲಿಗೆ ಮಹಾತ್ಮ ಗಾಂಧಿ ಎಂದು ಬದಲಾವಣೆ ಮಾಡಿದ್ದಾರೆ. ಅಲ್ಲದೇ, ಡಾನ್ ಪತ್ರಿಕೆಯ ಮುಖಪುಟದಲ್ಲಿದ್ದ ಮೂಲ ಚಿತ್ರವನ್ನು ತೆಗೆದು , ಮಲಯಾಳಂನ ಪ್ರಸಿದ್ಧ ದಿನಪತ್ರಿಕೆ ಮಾನೋರಾಮ ಪತ್ರಿಕೆಯ ಚಿತ್ರವನ್ನು ಹಾಕಿದ್ದಾರೆ.
ವಿಕಿ ಲೇಖನದ ಮೊದಲ ಸಾಲಿನಲ್ಲಿ ಭಾರತ ಮಾತಾ ಕೀ ಜೈ, ಜಾಗತಿಕ ಭಯೋತ್ಪಾದನೆ ವಿರುದ್ಧ ಒಗ್ಗೂಡಿ, ನಮ್ಮನ್ನು ಶತ್ರುಗಳಿಂದ ಕಾಪಾಡಿದ್ದ ಎಲ್ಲಾ ಹುತಾತ್ಮ ಯೋಧರಿಗೂ ಎಲ್ಲಾ ಭಾರತೀಯ ಪರವಾಗಿ ಧನ್ಯವಾದ ಆರ್ಪಿಸುವುದಾಗಿ ಸಂತಾಪ ಸೂಚಿಸಲಾಗಿದೆ.
ಪಾಕಿಸ್ತಾನದ ಚುನಾವಣಾ ಆಯೋಗದ ಅಧಿಕೃತ ಕಚೇರಿಯ ವೆಬ್ ಸೈಟ್ , ಹಿಂದೂಮಹಾಸಭಾದ ಲೇಖನ ಎಡಿಟ್ ಸೇರಿದಂತೆ ಹಲವು ಕೃತ್ಯಗಳಿಂದ ಸೈಬರ್ ಜಗತ್ತಿನಲ್ಲಿ ಕೇರಳ ಸೈಬರ್ ಹ್ಯಾಂಕರ್ಸ್ ಗಳು ಕುಖ್ಯಾತಿ ಪಡೆದುಕೊಂಡಿದ್ದಾರೆ.