ಭಾರತೀಯ ವಾಯುಸೇನೆಗೆ ಆನೆಬಲ: ಅವಶ್ಯವಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ: ಖಾಸಗಿ ಪೈಲಟ್‍ಗಳು!
0
ಫೆಬ್ರವರಿ 28, 2019
ನವದೆಹಲಿ: ಪಾಕಿಸ್ತಾನ ಮತ್ತು ಭಾರತ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಈ ಮಧ್ಯೆ ಯುದ್ಧದ ಕಾರ್ಮೋಡ ಹರಡಿರುವ ಬೆನ್ನಲ್ಲೇ ಇದೀಗ ಭಾರತೀಯ ವಾಯುಸೇನೆಗೆ ಆನೆಬಲ ಸಿಕ್ಕಂತಾಗಿದ್ದು ಅವಶ್ಯವಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ ಎಂದು ಖಾಸಗಿ ಪೈಲಟ್ಸ್ ಹೇಳಿದ್ದಾರೆ.
ಪಾಕಿಸ್ತಾನ ಜತೆ ಯುದ್ಧ ಮಾಡುವುದಾದರೆ ನಾವೂ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಉಡಾವಣೆ ಮಾಡುತ್ತೇವೆ ಎಂದು ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರತೀಯ ವಾಣಿಜ್ಯ ಪೈಲಟ್ಸ್ ಅಸೋಸಿಯೇಷನ್(ಐಸಿಪಿಎ) ಹೇಳಿದೆ.
ಬುಧವಾರ ಪಾಕಿಸ್ತಾನದ ಮೂರು ಎಫ್-16 ವಿಮಾನಗಳು ಗಡಿ ದಾಟಿ ಭಾರತದೊಳಗೆ ಬಂದು ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದವು. ಈ ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಅವರಿಗೆ ಪ್ರತಿರೋಧ ತೋರಿ ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಅಲ್ಲದೆ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸುವ ಮೂಲಕ ಪಾಕಿಸ್ತಾನಕ್ಕೆ ಕಟು ಸಂದೇಶವನ್ನು ರವಾನಿಸಿತ್ತು.