ಆನೆಕಲ್ಲು ಶಾಲಾ ವಾರ್ಷಿಕೋತ್ಸವ
0
ಫೆಬ್ರವರಿ 05, 2019
ಮಂಜೇಶ್ವರ: ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಬೆಳಿಗ್ಗೆ ಗಣರಾಜ್ಯೊತ್ಸವದ ಧ್ವಜಾರೋಹಣ ನಡೆದು ಮಕ್ಕಳ ಆಕರ್ಷಕ ಪಥ ಸಂಚಲನ ಮನಸೂರೆಗೊಳಿಸಿತು. ಮಧ್ಯಾಹ್ನ ಭೋಜನದ ನಂತರ ನಿವೃತ್ತ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ತರಗತಿ ಕೊಠಡಿಯನ್ನು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ ಮೋಹನ್‍ದಾಸ್ ಉದ್ಘಾಟಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಅಪರಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯೆ ಸೀತ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ, ಕ್ಷೇತ್ರ ನಿರೂಪಣಾಧಿಕಾರಿ ವಿಜಯ ಕುಮಾರ್.ಪಿ, ಮುಖ್ಯ ಅತಿಥಿಗಳಾ ಉಪಸ್ಥಿತರಿದ್ದು ಮಾತನಾಡಿದರು. ಶಾಲಾ ಪ್ರಬಂಧಕಿ ಮಾಲತಿ.ಟಿ.ಭಟ್,ನಿವೃತ್ತ ಶಾಲಾ ಮುಖ್ಯ ಶಿಕ್ಷಕಿ ಶ್ರೀಕುಮಾರಿ ಟೀಚರ್, ಡಯಟ್ ಉಪನ್ಯಾಸಕ ಶಶಿಧರ್ ಕಾಸರಗೋಡು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆನೆಕಲ್ಲು ಒಕ್ಕೂಟದ ಸೇವಾ ಫ್ರತಿನಿಧಿ ಜಯಂತಿ ಗೌಡ, ಶಾಲಾ ಅಭಿವೃಧಿ ಸಮಿತಿಯ ಉಪಾಧ್ಯಕ್ಷ್ಯ ಉಮರಬ್ಬ ಆನೆಕಲ್ಲು, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ್ಯ ಅಶ್ರಫ್.ಎ.ಎಂ., ಮಾತೃಸಂಘದ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷೆ ಸಫಿಯ ಶುಭಾಶಂಸಣೆಗೈದರು.
ಸಮಾರಂಭದಲ್ಲಿ ಆನೆಕಲ್ಲು ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಕುಮಾರಿ ಟೀಚರ್ ತರಗತಿ ಗ್ರಂಥಾಲಯಕ್ಕೆ 7 ಕಪಾಟನ್ನು ಉದಾರವಾಗಿ ಹಸ್ತಾಂತರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಕ್ರೀಡೆಯಲ್ಲಿ ಹೆಚ್ಚುಅಂಕ ಗಳಿಸಿದ ತಂಡಕ್ಕೆ ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಮಾಸ್ತರ್ ರೋಲಿಂಗ್ ಟ್ರೋಫಿ ಮತ್ತು ಸೊಡಂಕೂರು ತಿರುಮಲೇಶ್ವರ ಭಟ್ ಇವರ ದತ್ತಿ ನಿಧಿ ಬಹುಮಾನವನ್ನು ವಿತರಿಸಲಾಯಿತು. ಮಲಾರು ಬೀಡು ವಸಂತ ಆಳ್ವರ ಪ್ರೋತ್ಸಾಹ ಧನವನ್ನು ನೀಡಲಾಯಿತು. ಮೋಹನ್ ರಾವ್ ರವರ ರೋಲಿಂಗ್ ಟ್ರೋಫಿ,ಅತೀ ಹೆಚ್ಚು ಅಂಕಗಳಿಸಿದ ತೇರ್ಗಡೆ ಹೊಂದಿದ ವಿಧ್ಯಾರ್ಥಿಗೆ ಶಾಲಾ ಪ್ರಬಂಧರು ಪ್ರೋತ್ಸಾಹ ಧನವನ್ನು ವಿತರಿಸಿದರು. ನಿರಂತರವಾಗಿ ಶಾಲಾ ಸವಾರ್ಂಗೀಣ ಅಭಿವೃಧಿಗೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಪ್ರಸ್ತುತ ಉಪಾಧ್ಯಕ್ಷ ಅವಿರತವಾಗಿ ಶ್ರಮಿಸುತ್ತಿರುವ ಅಶ್ರಫ್.ಎ.ಎಂ ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ರೇಣುಕಾ. ವಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ರವಿಶಂಕರ್ ಮಾಸ್ತರ್ ವಂದಿಸಿದರು. ಶಾಲಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಜೀವನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸೃತಿಕ ಕಲಾ ವೈಭವ ನಡೆಯಿತು. ವಿವಿಧ ನೃತ್ಯ. ನಾಟಕ, ಮೈಮ್ ಶೋ, ಒಪ್ಪನ, ಪಿರಮಿಡ್ ಡಾನ್ಸ್, ಜನಪದ ನೃತ್ಯ ಮುಂತಾದವುಗಳು ಸೇರಿದ್ದ ಪ್ರೇಕ್ಷಕರ ಮನಸೂರೆಗೊಳಿಸಿತು.