ಮಂಜೇಶ್ವರ: ವರ್ಕಾಡಿ ಗುವೆದಪಡ್ಪು ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮವು ಫೆ.3ರಂದು ಅಪರಾಹ್ನ 2.30ಕ್ಕೆ ಗ್ರಂಥಾಲಯದ ವಠಾರದಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್‍ನ ಅಧ್ಯಕ್ಷ ಎಸ್.ನಾರಾಯಣ ಭಟ್ ನೆರವೇರಿಸುವರು. ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೊಣಿಬೈಲು ಅಧ್ಯಕ್ಷತೆ ವಹಿಸಲಿದ್ದಾರೆ.
ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್‍ನ ಕೌನ್ಸಿಲರ್ ಶ್ಯಾಮ ಭಟ್ ಪುಸ್ತಕ ಸಂಗ್ರಹ ಅಭಿಯಾನವನ್ನು ಉದ್ಘಾಟಿಸುವರು. ಸದಸ್ಯತ್ವದ ಅಭಿಯಾನವನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್‍ನ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ. ಉದ್ಘಾಟಿಸಲಿರುವರು. ಬಾಲವೇದಿ ಕೇಂದ್ರ ಉದ್ಘಾಟನೆಯನ್ನು ರಂಗ ನಿರ್ದೇಶಕ ಹಾಗೂ ಲೈಬ್ರೆರಿ ಸದಸ್ಯ ಉದಯ್ ಸಾರಂಗ್ ನೆರವೇರಿಸುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ಇಂದಿರಾ, ಭಾರತಿ, ಸೀತಾ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್‍ನ ಜೊತೆ ಕಾರ್ಯದರ್ಶಿ ಕಮಲಾಕ್ಷ ಡಿ., ಶ್ರೀನಿವಾಸ ಸ್ವರ್ಗ, ರಾಮಕೃಷ್ಣ ಭಟ್ ಮಾಸ್ತರ್ ಸೊಡಂಕೂರು, ಪಿ.ಎಂ.ಮೂಸ ಮದನಿ ಗುವೆದಪಡ್ಪು, ಸಿಸ್ಟರ್ ಪ್ರೆಸಿಲ್ಲಾ ಕಳಿಯೂರು, ರಾದಾಕೃಷ್ಣ ಬಲ್ಲಳ್ ದೈಗೋಳಿ, ಸುಂದರ ಮಾಸ್ತರ್ ದೈಗೋಳಿ, ರಾಜೀವಿ ಕಳಿಯೂರು, ಗೋಪಾಲ ಕೊಡ್ಲಮೊಗರು, ಮಧುಸೂದನ್, ಅಶೋಕ್ ಕೊಡ್ಲಮೊಗರು ಮತ್ತಿತರರು ಉಪಸ್ಥಿತರಿರುವರು.
ಅಪರಾಹ್ನ 3.30ಕ್ಕೆ ಶಿಕ್ಷಕಿ, ಸಾಹಿತಿ ಆಶಾ ದಿಲೀಪ್ ರೈ ಸುಳ್ಯಮೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಲಿದೆ. ಬಳಿಕ ಪೆರ್ಲ ಎಸ್‍ಎನ್‍ಎ ಶಾಲೆಯ ಮಕ್ಕಳಿಂದ `ವಿವೇಕಾ ಗೀತಾ' ಹಾಡುಗಳ ಸಂಗಮ ಎಂಬ ವೈಶಿಷ್ಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.