ನೀರಿನಬರ ಪರಿಹಾರ ಸಂಬಂಧ ಸಭೆ
0
ಫೆಬ್ರವರಿ 05, 2019
ಕಾಸರಗೋಡು: ಜಿಲ್ಲೆ ಎದುರಿಸುತ್ತಿರುವ ಕುಡಿಯುವ ನೀರಿನ ಬರ ಪರಿಹಾರ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯತ್ ಗಳ ಜಲಾಶಯಗಳ ಗುಣಮಟ್ಟ ಪರಿಶೀಲನೆ ನಡೆಸುವಂತೆ, ಈಗಿರುವ ಕರ್ಗಲ್ಲಕೋರೆಗಳನೀರು ಬಳಕೆಗೆ ಯೋಗ್ಯವಾಗಿದ್ದಲ್ಲಿ ವರದಿ ಮಾಡುವಂತೆ ಸಭೆ ಆಗ್ರಹಿಸಿದೆ. ಕುಡಿಯುವನೀರು ವಿತರನೆಗೆ ಕೊಟೇಷನ್ ನಡೆಸಲು, ನೀರು ಸಂಗ್ರಹ ಟಾಂಕಿಗಳ ಚಟುವಟಿಕೆಗೆ ಸುಧಾರಿತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಲ್ಲಾದರೂ ಅಕ್ರಮವಾಗಿ ಕೊಳವೆಬಾವಿನಿರ್ಮಾಣ ನಡೆಯುವುದಿದ್ದರೆ, ಅದಕ್ಕೆ ಸಂಬಂಧಪಟ್ಟ ವಾಹನಗಳನ್ನು ವಶಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಯಿತು. ವಿವಿಧ ಗ್ರಾ.ಪಂ.ಪ್ರತಿನಿಧಿಗಳು ಉಪಸ್ಥಿತರಿದ್ದರು.