ಚಿನ್ಮಯ ಕಲಾಮಂದಿರ ದಿನಾಚರಣೆ
0
ಫೆಬ್ರವರಿ 28, 2019
ಕಾಸರಗೋಡು: ಚಿನ್ಮಯ ಕಲಾಮಂದಿರ ವಿದ್ಯಾರ್ಥಿಗಳ ಪ್ರತಿಭೆಯನ್ನು ಪೆÇೀಷಿಸಲಿರುವ ವೇದಿಕೆ. ಚಿಕ್ಕಂದಿನಿಂದಲೇ ಸಂಗೀತ, ನೃತ್ಯ, ತಬಲಾ ಮೊದಲಾದ ಕಲೆಗಳಲ್ಲಿ ತರಬೇತಿ ಹೊಂದಿ ಶ್ರೇಷ್ಠ ಕಲಾವಿದರಾಗುವ ಅವಕಾಶ ಚಿನ್ಮಯ ವಿದ್ಯಾಲಯದಲ್ಲಿ ಕಲ್ಪಿಸಲಾಗಿದೆ.
ನುರಿತ ಗುರುಗಳಾದ ದಿವ್ಯಾ ಮಹೇಶ್, ಶ್ರೀಧರ ರೈ ಅವರಿಂದ ತರಬೇತಿ ಹೊಂದಿದ ಶಿಷ್ಯರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಸಮೂಹ ಶಾಸ್ತ್ರೀಯ ಗಾಯನ, ಸಮೂಹ ಶಾಸ್ತ್ರೀಯ ನೃತ್ಯ ಮತ್ತು ತಬಲಾ ವಾದನವನ್ನು ಪ್ರದರ್ಶಿಸಿದರು.
ಶಾಲಾ ಪ್ರಾಂಶುಪಾಲ ಬಿ.ಪುಷ್ಪರಾಜ್, ಉಪಪ್ರಾಂಶುಪಾಲೆ ಸಂಗೀತಾ ಪ್ರಭಾಕರನ್, ಮುಖ್ಯೋಪಾಧ್ಯಾಯಿನಿಯರಾದ ಸಿಂಧು ಶಶೀಂದ್ರನ್, ಪೂರ್ಣಿಮ ಎಸ್.ಆರ್. ಉಪಸ್ಥಿತರಿದ್ದರು. ನಿಧಿ ಜಿ.ಕಾಮತ್ ಸ್ವಾಗತಿಸಿ, ವೈಷ್ಣವಿ ಎಂ.ಭಟ್ ವಂದಿಸಿದರು.