ಬಹುನಿರೀಕ್ಷಿತ ಕೇರಳ ತುಳು ಅಕಾಡೆಮಿ ತುಳು ಭವನಕ್ಕೆ ಶಂಕುಸ್ಥಾಪನೆ ಸಂಸ್ಕøತಿ ಕಾಲ ಪ್ರವಾಹದಲ್ಲಿ ನಲುಗದಿರಲಿ-ಸ್ಪೀಕರ್ ಶ್ರೀರಾಮಕೃಷ್ಣನ್
0
ಫೆಬ್ರವರಿ 28, 2019
ಮಂಜೇಶ್ವರ: ವಿಶಾಲ ಪರಿಕಲ್ಪನೆಯ ಭಾರತೀಯ ಸಂಸ್ಕøತಿ ವೈವಿಧ್ಯತೆಗಳಿಂದ ಜಗತ್ತಿನಲ್ಲೇ ವಿಶಿಷ್ಟವಾಗಿದೆ. ಇತರೆಡೆಗಳಿಗಿಂತ ವಿಭಿನ್ನವಾಗಿ ವೈವಿಧ್ಯತೆಯ ನಡುವೆಯೂ ಒಗ್ಗಟ್ಟಿನಿಂದ ಮುನ್ನಡೆಯುವಲ್ಲಿ ರಾಷ್ಟ್ರದ ಭಾಷೆ-ಭಾಷೆಗಳ ಮಧ್ಯೆ ಇರುವ ಸಂಬಂಧಗಳು ಮಹತ್ವಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಗಡಿನಾಡು ಕಾಸರಗೋಡಿನ ಬಹುಭಾಷಾ ಸಂಸ್ಕøತಿಯಲ್ಲಿ ತುಳು ಭಾಷೆ ಮಾತೃಸ್ಥಾನದಲ್ಲಿ ಇಲ್ಲಿಯ ಸಂಸ್ಕøತಿಗೆ ಅರ್ಥಪೂರ್ಣತೆ ನೀಡಿದೆ ಎಂದು ರಾಜ್ಯ ವಿಧಾನ ಸಭಾ ನಾಯಕ ಶ್ರೀರಾಮಕೃಷ್ಣನ್ ತಿಳಿಸಿದರು.
ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿ ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ತುಳು ಭವನಕ್ಕೆ ಬುಧವಾರ ಸಂಜೆ ಶಿಲಾನ್ಯಾಸಗೈದು ಅವರು ಮಾತನಾಡಿದರು.
ಸಂಸ್ಕøತಿಗೆ ನಿಗದಿತ ಸ್ವರೂಪವನ್ನು ಆರೋಪಿಸಿ ಗ್ರಹಿಸುವುದು ಸರಿಯಲ್ಲ. ಅದು ಸಂಸ್ಕಾರದ ಧಾರೆಯನ್ನು ವರ್ತಮಾನದ ಕಾಲಮಾನಕ್ಕನುಸರಿಸಿ ಅಡೆತಡೆ ರಹಿತವಾಗಿ ಕಲ್ಮಶತೆಗಳಿಲ್ಲದೆ ಮುಂದುವರಿಸುವಲ್ಲಿ ಮನಸ್ಸುಗಳನ್ನು ತೆರೆದುಕೊಳ್ಳಬೇಕು ಎಂದು ತಿಳಿಸಿದ ಅವರು, ಕಾಸರಗೋಡಿನಲ್ಲಿ ತುಳು ಭಾಷೆ, ಸಮಸ್ಕøತಿಯ ಪುನರುತ್ಥಾನಕ್ಕೆ ತುಳು ಅಕಾಡೆಮಿ ಸಾಕಷ್ಟು ಪುನಶ್ಚೇತನ ನೀಡಲಿ ಎಂದು ತಿಳಿಸಿದರು.
ಕಾಸರಗೋಡು ಸಂಸದ ಪಿ.ಕರುಣಾಕರನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಲು ತುಳು ಅಕಾಡೆಮಿಗೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳ ಕಾಲ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸಲು ಅಸಾಧ್ಯವಾಗಿ ಮೂಲೆಗುಂಪಾಗುವ ಭೀತಿಯಲ್ಲಿದ್ದ ಅಕಾಡೆಮಿಯನ್ನು ಮತ್ತೆ ಚಾಲನೆ ಗೆ ತರುತ್ತಿರುವ ರಾಜ್ಯ ಸರಕಾರದ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡುವ ನಿಟ್ಟಿನಲ್ಲಿ ತಾನು ಲೋಕಸಭೆಯಲ್ಲಿ ಅಹರ್ನಿಶಿ ಕಾರ್ಯಪ್ರವೃತ್ತನಾಗಿರುವುದನ್ನು ಉಲ್ಲೇಖಿಸಿದ ಅವರು, ಕರ್ನಾಟಕದ ಮೂಲ ತುಳು ಭಾಷೆಯ ನಾಲ್ವರು ಸಂಸದರು ಪ್ರಯತ್ನಿಸದಿದ್ದರೂ, ಮಲೆಯಾಳಿಯಾದ ತಾನು ಈ ಬಗ್ಗೆ ಹೆಚ್ಚು ಆಸಕ್ತಿಯಿಂದ ಪ್ರಯತ್ನಗಳಲ್ಲಿ ಮುಂದುವರಿಯುತ್ತಿರುವುದಾಗಿ ತಿಳಿಸಿದರು.
ಉದುಮ ಶಾಸಕ ಕೆ.ಕುಂಞÂರಾಮನ್, ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞÂಂಬು, ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ವಿವಿಧ ಪಕ್ಷಗಳ ಮುಖಂಡರುಗಳಾದ ಬಿ.ವಿ.ರಾಜನ್, ವಿ.ಕೆ.ರಮೇಶನ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಗಿಳಿವಿಂಡಿನ ಕಾರ್ಯದರ್ಶಿ ಕೆ.ಆರ್.ಜಯಾನಂದ, ಕಾಸರಗೋಡು ತುಳು ಕೂಟದ ನ್ಯಾಯವಾದಿ ಅಡೂರು ಉಮೇಶ್ ನಾೈಕ್, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಮಂಜೇಶ್ವರ ತಹಶೀಲ್ದಾರ್ ಜೋನ್ ವರ್ಗೀಸ್ ಪಿ, ಭಾರತ್ ಭವನ್ ಕಾರ್ಯಕಾರಿ ಸದಸ್ಯ ಎಂ.ಶಂಕರ ರೈ ಮಾಸ್ತರ್, ಕ.ಸಾ.ಪ.ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಸಿಡಿಎಸ್ ಮಂಜೇಶ್ವರ ಘಟಕದ ಅಧ್ಯಕ್ಷೆ ಜ್ಯೋತಿಪ್ರಭಾ.ಪಿ. ಉಪಜಿಲ್ಲಾಧಿಕಾರಿ ಜಯಲಕ್ಷ್ಮೀ, ತುಳು ಅಕಾಡೆಮಿ ಸದಸ್ಯರಾದ ರಾಧಾಕೃಣ ಉಳಿಯತ್ತಡ್ಕ, ರವೀಂದ್ರ ರೈ ಮಲ್ಲಾವರ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ತುಳು ಮಲೆಯಾಳ ಭಾಷಾ ನಿಘಂಟು ಕರ್ತೃ ಡಾ.ಎ.ಎಂ.ಶ್ರೀಧರನ್, ತುಳು ಭಾಷಾ ಸಂಶೋಧಕಿ ಡಾ.ಲಕ್ಷ್ಮೀ ಜಿ.ಪ್ರಸಾದ್, ಹಿರಿಯ ಸಾಹಿತಿ, ಪತ್ರಕರ್ತ ಮಲಾರು ಜಯರಾಮ ರೈ ಅವರನ್ನು ತುಳು ಭಾಷಾ ಸಂಬಂಧ ವಿವಿಧ ಚಟುವಟಿಕೆಗಳಿಗಾಗಿ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭ ತುಳು ಅಕಾಡೆಮಿ ಪ್ರಕಟಿಸುವ ತ್ರೈಮಾಸಿಕ ಸಂಚಿಕಿ ತೆಂಬೆರೆಯನ್ನು ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಞÂಂಬು ಬಿಡುಗಡೆಗೊಳಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಕುಮಾರ್ ಪಾವಳ ವಂದಿಸಿದರು. ಸದಸ್ಯ ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬೊಳಿಕೆ ಜಾನಪದ ಕಲಾತಂಡದಿಂದ ವಿವಿಧ ತುಳು ಜಾನಪದ ನೃತ್ಯ-ಹಾಡುಗಳ ಪ್ರದರ್ಶನ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ವೈವಿಧ್ಯಗಳು ನಡೆಯಿತು. ಜೊತೆಗೆ ತುಳು ಸಾಹಿತ್ಯ ಕೃತಿಗಳ ಮಾರಾಟ, ಪ್ರದರ್ಶನ, ತುಳುನಾಡ ಜಾನಪದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.