ಕಾನ ಮಠ ಹೊಸ್ತಿನದೇವ ಕಾರ್ಯ-ದೈವ ಕೋಲ ಸಂಪನ್ನ
0
ಫೆಬ್ರವರಿ 06, 2019
ಕುಂಬಳೆ: ನಾರಾಯಣಮಂಗಲ ಸಮೀಪದ ಕಾನ ಶ್ರೀ ಶಂಕರನಾರಾಯಣ ಮಠದಲ್ಲಿ ವರ್ಷಾವಧಿ ಹೊಸ್ತಿನ ದೇವಕಾರ್ಯ ಹಾಗು ಶ್ರೀ ಧೂಮಾವತಿ ದೈವದ ಕೋಲ ಕಾರ್ಯಕ್ರಮಗಳು ಫೆ.2 ಮತ್ತು 3 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.
ಫೆ.1 ರಂದು ಪೂರ್ವಾಹ್ನ 10 ಕ್ಕೆ ಕೊಪ್ಪರಿಗೆ ಮುಹೂರ್ತ ನೆರವೇರಿತು. ಫೆ.2 ರಂದು ಪೂರ್ವಾಹ್ನ 8 ರಿಂದ ರುದ್ರ ಪಾರಾಯಣ, 10.30 ಕ್ಕೆ ತುಲಾಭಾರ ಸೇವೆ, 11.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 7.30 ಕ್ಕೆ ಭಂಡಾರ ಮನೆಯಿಂದ ಶ್ರೀ ಧೂಮಾವತೀ ದೈವದ ಭಂಡಾರ ಹೊರಟು, ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀ ಶಂಕರನಾರಾಯಣ ಮಠಕ್ಕೆ ಆಗಮಿಸಿತು. ಬಳಿಕ ಶ್ರೀ ಶಂಕರನಾರಾಯಣ ದೇವರಿಗೆ ಮಹಾಪೂಜೆ ನಡೆಯಿತು. ಫೆ.3 ರಂದು ಪೂರ್ವಾಹ್ನ 10 ಕ್ಕೆ ಶ್ರೀ ಧೂಮಾವತಿ ದೈವದ ಕೋಲ ನೆರವೇರಿ, ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿತರಣೆ, ಅನ್ನದಾನಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಊರ-ಪರವೂರ ಸಾವಿರಾರು ಭಕ್ತರು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು.