ದುಬಾಯಿ: ಸುಬ್ಬಯ್ಯಕಟ್ಟೆ ಕೈರಳಿ ಪ್ರಕಾಶನದ ಕನ್ನಡ ಕೈರಳಿ ಪತ್ರಿಕೆಯ ಅನಿವಾಸಿ ವಿಶೇಷ ಸಂಚಿಕೆಯನ್ನು ಇತ್ತೀಚೆಗೆ ದುಬಾಯಿಯ ದೇರಾ ಕ್ಲಾಕ್ ಟವರ್‍ನ ಬಿಸಿನೆಸ್ ವಿಲೇಜ್ ಸಂಕೀರ್ಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕೇರಳ ಬ್ಯಾರಿ ಅಕಾಡೆಮಿ ಸದಸ್ಯ ಝಡ್ ಎ.ಕಯ್ಯಾರು ಅವರು ಗಡಿನಾಡ ಕಲಾ ಸಾಂಸ್ಕøತಿಕ ಅಕಾಡೆಮಿಯ ದುಬಾಯಿ ಘಟಕದ ಪ್ರಧಾನ ಕಾರ್ಯದರ್ಶಿ ಅಸೀಸ್ ಬಳ್ಳೂರು ಅವರಿಗೆ ಪತ್ರಿಕೆ ನೀಡುವ ಮೂಲಕ ಉದ್ಘಾಟಿಸಿದರು. ಅಕಾಡೆಮಿ ಕೋಶಾಧಿಕಾರಿ ಅನೀಶ್ ಶೆಟ್ಟಿ, ಉಪಾಧ್ಯಕ್ಷ ಮುನೀರ್ ಕ್ಲಾಸಿಕ್, ಅಶ್ರಫ್ ಪಾವೂರು, ಸಿದ್ದೀಕ್ ಕಯ್ಯಾರು, ಅಕಾಡೆಮಿಯ ಕಾರ್ಯದರ್ಶಿಗಳಾದ ಯೂಸುಫ್ ಶೇಣಿ, ಇಬ್ರಾಹಿಂ, ತಾಜುದ್ದೀನ್ ಕುಬಣೂರು ಹಾಗೂ ಸುಬೈರ್ ಕುಬಣೂರು, ಯಾಕೂಬ್ ಅರಿಮಲೆ, ಮನೀಶ್ ಶೆಟ್ಟಿ, ಸಿದ್ದೀಕ್ ಜೋಡುಕಲ್ಲು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ದುಬಾಯಿಯಲ್ಲಿ ಗಡಿನಾಡಿನ ಸಾಂಸ್ಕøತಿಕತೆಯ ಕಂಪನ್ನು ನೆನಪಿಸುವ ಪತ್ರಿಕೆಯೊಂದು ವಿಶೇಷಾಂಕದ ಮೂಲಕ ಕೈಸೇರಿರುವುದು ತಾಯ್ನೆಲದ ನಲ್ಮೆಯ ಅನುಭೂತಿಗೆ ಕಾರಣವಾಗಿದೆ. ಕನ್ನಡ ಕೈರಳಿ ಸಾಗರದೀಚೆ ಹೆಚ್ಚು ಜನಪ್ರೀಯತೆಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದೆಂದು ನೆರೆದಿದ್ದ ಅನಿವಾಸಿ ಭಾರತೀಯರು ಅಭಿಪ್ರಾಯ ವ್ಯಕ್ತಪಡಿಸಿ,ಕೈರಳಿಯ ಕನ್ನಡ ಕಾಯಕವನ್ನು ಶ್ಲಾಘಿಸಿದರು.