ಹಾಲುತ್ಪಾದಕ ಸಂಘದ ಸದಸ್ಯರಿಗೆ ತರಬೇತಿ
0
ಫೆಬ್ರವರಿ 08, 2019
ಕಾಸರಗೋಡು: ಕಾಸರಗೋಡು ಸಹಿತ ಕೆಲವು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರಿ ಸಂಘ ಆಡಳಿತೆ ಸಮಿತಿ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಲ್ಲಿಕೋಟೆಯಲ್ಲಿ ಜರಗಲಿದೆ.
ಕಲ್ಲಿಕೋಟೆ ಬೇಪೂರ್ ನಡುವಟ್ಟಂನಲ್ಲಿರುವ ಕೇರಳ ಸರಕಾರದ ಹಾಲು ಉತ್ಪಾದಕರ ತರಬೇತಿ ಕೇಂದ್ರದಲ್ಲಿ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳ ಮಂದಿಗಾಗಿ ಫೆ.12, 13ರಂದು ತರಬೇತಿ ನಡೆಯಲಿದೆ. ಆಸಕ್ತರು 12ರಂದು ಬೆಳಗ್ಗೆ 10 ಗಮಟೆಗೆ ಮುಂಚಿತವಾಗಿ ಫೆÇೀಟೋ ಸಹಿತದ ಗುರುತು ಚೀಟಿಯ ನಕಲು, 15 ರೂ. ನೋಂದಣಿ ಶುಲ್ಕ ಸಹಿತ ಕೇಂದ್ರಕ್ಕೆ ಆಗಮಿಸಿ, ಹೆಸರು ನೋಂದಣಿ ನಡೆಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 0495-2414579. ಅಥವಾ ಬ್ಲಾಕ್ ಮಟ್ಟದ ಹಾಲು ಉತ್ಪಾದಕರ ಸೇವಾ ಘಟಕವನ್ನು ಸಂಪರ್ಕಿಸಬಹುದು.