HEALTH TIPS

ಆಧ್ಯಾತ್ಮಿಕ ತಿರುಳು ಅರಿತರೆ ಆತ್ಮೋದ್ದಾರ-ಒಡಿಯೂರು ಶ್ರೀ ಇಡಿಯಡ್ಕ ಶ್ರೀಕ್ಷೇತ್ರದ ಗುರುವಾರದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ


               ಪೆರ್ಲ: ಧರ್ಮ ಮತ್ತು ಸಂಸ್ಕøತಿಗಳು ಜೊತೆಗಿದ್ದರೆ ಬದುಕು ಸುಖಕರವಾಗುತ್ತದೆ. ಊದ್ರ್ವಮೂಲ ಸಂಸ್ಕøತಿಯು ಆತ್ಮನಿಷ್ಠವಾಗಿ ಜಗತ್ತಿನ ಸಕಲ ಚರಾಚರಗಳಿಗೂ ಸನ್ಮಂಗಲವನ್ನು ಬಯಸುವ ಏಕೈಕ ಧರ್ಮವಾಗಿ ಭರತ ವರ್ಷದ ಪರಂಪರೆ ಅವಿನಾಶಿಯಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಮಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಅಶೀರ್ವಚನಗೈದು ತಿಳಿಸಿದರು.
           ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನಗೈದು ಅವರು ಮಾತನಾಡಿದರು.
       ದೇಹದೊಳಗೆ ಆತ್ಮ, ಆತ್ಮವನ್ನು ನಿಯಂತ್ರಿಸುವ ಪರಮಾತ್ಮ ಇದ್ದಾನೆ ಎಂದು ನಂಬಲಾಗಿದೆ.ಧರ್ಮ ಸೂಕ್ಷ್ಮತೆ ಅತಿಶ್ರೇಷ್ಟ ಹಾಗೂ ಧರ್ಮ ಸಂಸ್ಕೃತಿ ಬದುಕನ್ನು ನಡೆಸಲು ಕಲಿಸುವುದು.ಸಂಪತ್ತಿನ ಭೊಗ ಹಾಗೂ ದಾನದೊಂದಿಗೆ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು.ಇಲ್ಲವಾದಲ್ಲಿ ಆ ಸಂಪತ್ತು ನಾಶವಾಗುವುದು. ಆಧ್ಯಾತ್ಮಿಕತೆಯ ತಿರುಳನ್ನು ಅರಿತಿರೆ ಆತ್ಮೋದ್ಧಾರ ಸಾಧ್ಯ. ರಾಷ್ಟ್ರದ ಉಳಿವು ಧರ್ಮದಲ್ಲಿ ಅಡಗಿದ್ದು ಧರ್ಮವನ್ನು ಮರೆತ ದೇಶ ಹಾಗೂ ವ್ಯಕ್ತಿಗೆ ಉಳಿವಿಲ್ಲ ಎಂದರು.
       ಸಭೆಯಲ್ಲಿ ಧಾರ್ಮಿಕ ಉಪನ್ಯಾಸಗೈದ ಖ್ಯಾತ ವಾಗ್ಮಿ ಚೈತ್ರ ಕುಂದಾಪುರ ಅವರು, ಹಿಂದು ಧರ್ಮದಲ್ಲಿ ಧಾರ್ಮಿಕ ಆಚರಣೆಗಳಿಗೆ ಕಟ್ಟುಪಾಡುಗಳಿದ್ದರೂ ಅದನ್ನು ಮೀರಿದ ನಂಬಿಕೆಗಳಿವೆ.ಪುಟ್ಟ ಪುಟ್ಟ ಕಾರ್ಯಕ್ರಮಗಳಿಂದ ಜನರ ಮನ ಬೆಸೆಯಲು ವೈಷಮ್ಯ ನೀಗಿಸಲು ಸಾಧ್ಯಎಂದು ಹೇಳಿದರು
     ಬದುಕಿನ ಆರಂಭ ಹಾಗೂ ಅಂತ್ಯ ಶೂನ್ಯದಿಂದ ಕೂಡಿದೆ.ಮನುಷ್ಯ ತನ್ನ 'ಅಹಂ' ಅನ್ನು ತ್ಯಜಿಸಿ
ಶೂನ್ಯತಾ ಭಾವದೊಂದಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸುವ ಪುಣ್ಯ ಸ್ಥಳವೇ ದೇಗುಲಗಳು.ಹೊರೆಕಾಣಿಕೆ ಮೆರವಣಿಗೆಗಳ ಪಾಲ್ಗೊಳ್ಳುವಿಕೆ ಧಾರ್ಮಿಕ ಆಚರಣೆಯಲ್ಲಿ ನಾವೂ ಪಾಲುದಾರರು ಎಂಬುವುದರ ಸಾಕೇತಿಕವಾದರೆ ಭಜನಾ ತಂಡ, ಚೆಂಡೆ ಮೇಳ, ಸಭೆ ಸಮಾರಂಭಗಳು ಬಹು ದೊಡ್ಡ ಪ್ರಮಾಣದ ಧಾರ್ಮಿಕ ಕ್ರಾಂತಿ ಮೂಡಿಸುವ ಸಾಮಥ್ರ್ಯ ಹೊಂದಿದೆ.ಪರಿಶ್ರಮದ ಪ್ರತಿ ಬೆವರ ಹನಿಯಲ್ಲೂ ದೇವರಿದ್ದಾನೆ.ಸಮಾಜವನ್ನು ಒಂದು ಗೂಡಿಸಲು ನಾವು ಶ್ರಮಿಸಬೇಕು.ಆ ಸಾಮಥ್ರ್ಯ ನಮ್ಮಲ್ಲಿದೆ.ಪರಂಪರೆ ಆಚರಣೆಗಳನ್ನು ಕಟ್ಟಿ ಬೆಳೆಸಿ ತಲೆಮಾರುಗಳಿಗೆ ಹಸ್ತಾಂತರಿಸುವ ಪರಿವರ್ತನೆಯ ಹರಿಕಾರರು ನಾವಾಗಬೇಕು ಎಂದರು.
  ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಮಾಜೀ ಧರ್ಮದರ್ಶಿ, ಉದ್ಯಮಿ ಕೃಷ್ಣಪ್ರಸಾದ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ವಿದ್ಯಾಭ್ಯಾಸ ಇಲಾಖೆಯ ನಿವೃತ್ತ ಅಧಿಕಾರಿ  ಅರವಿಂದ ಕುಮಾರ್ ಅಲೆವೂರಾಯ ನೇರಪ್ಪಾಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಜೀವನದಲ್ಲಿ ಶಿಸ್ತು ಹಾಗೂ ಬದ್ಧತೆ ಮುಖ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯಿಂದ ಒತ್ತಡಗಳು ದೂರವಾಗುವುದಲ್ಲದೆ ಧಾರ್ಮಿಕತೆಯನ್ನು ಎತ್ತಿ ಹಿಡಿಯುವ ಪ್ರಭೆ ಮೂಡುವುದು ಎಂದರು.
     ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ರಾಜಾರಾಮ ಪೆರ್ಲ ಮಾತನಾಡಿ, ರಾಷ್ಟ್ರ, ಧ್ವಜ, ಲಾಂಛನಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ರಾಷ್ಟ್ರಗೀತೆ ಹಾಡು ಎಲ್ಲೇ ಕೇಳಿಸಿದರೂ ಎದ್ದು ನಿಲ್ಲಬೇಕು.ಇದಕ್ಕೆ ವ್ಯತಿರಿಕ್ತವಾಗಿ  ಯಾರೇ ನಡೆದರೂ ಭಾರತಿಯರಾದ ನಾವು ಅದನ್ನು ಪ್ರಶ್ನಿಸಿ ವಿಮರ್ಶಿಸಬೇಕು.ನಾವು ಚಿಂತಕರಾಗಬೇಕೇ ಹೊರತು ಬುದ್ಧಿ ಜೀವಿಗಳಾಗಿ ಬದುಕ ಬಾರದು ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ಚೆಟ್ಟಿಯಾರ್ ಬಜಕೂಡ್ಲು ಉಪಸ್ಥಿತರಿದ್ದರು.
       ಕಾರ್ಯಕ್ರಮದಲ್ಲಿ ಧ್ವಜಸ್ಥಂಭದ ಮರ ನೀಡಿದ ಸುಬ್ರಹ್ಮಣ್ಯ ಬಳ್ಳಕ್ಕ ಅವರನ್ನು  ಗೌರವಿಸಲಾಯಿತು.ಪೆರ್ಲ ಶಾಲಾ ಶಿಕ್ಷಕ ಕೇಶವ ಪ್ರಕಾಶ ನೆಲ್ಲಿಕಳಯ ಸ್ವಾಗತಿಸಿ, ಉದಯ ಶಂಕರ್ ವಂದಿಸಿದರು.ಶೇಣಿ ಶಾಲಾ ಶಿಕ್ಷಕ ಪ್ರಶಾಂತ್ ಕುಮಾರ್ ನಿರೂಪಿಸಿದರು.
       ಶುಕ್ರವಾರ ಬೆಳಿಗ್ಗೆ 108 ಕಾಯಿಗಳ ಗಣಪತಿ ಹವನ, ಪ್ರತಿಷ್ಠಾ ಪಾಣಿ ಬಳಿಕ ಮೀನ ಲಗ್ನ ಸುಮೂರ್ತದಲ್ಲಿ ಧ್ವಜ ಪ್ರತಿಷ್ಠೆಯನ್ನು ತಂತ್ರಿವರ್ಯರುಗಳಾದ ಕುಂಟಾರು ವಾಸುದೇವ ತಂತ್ರಿ ಹಾಗೂ ರವೀಶ ತಂತ್ರಿಗಳನ್ನೊಳಗೊಂಡ ವೈದಿಕ ತಂಡದವರು ನಿರ್ವಹಿಸಿದರು. ಬಳಿಕ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಮತರ್ಪಣೆಗಳು ನಡೆಯಿತು. ಸಂಜೆ ರಂಗಪೂಜೆ, ಮಹಾಪೂಜೆಗಳು ನಡೆದವು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆದ್ರಂಪಳ್ಳದ ಶ್ರೀಗಣೇಶ ಭಜನಾ ತಮಡದವರಿಂದ ಸಂಕೀರ್ತನೆ, ಅಪರಾಹ್ನ ಭಜನಾ ಸಾಮ್ರಾಟ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದವರಿಂದ ದಾಸ ಸಂಕೀರ್ತನೆ, ಸಂಜೆ ಮರೆಯದ ಹಾಡು ಜಾನಪದ ಹಾಗೂ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ವಾಗ್ಮಿ ನಿತ್ಯಾನಂದ ವಿವೇಕವಂಶಿ ಅವರಿಂದ ಹಿಂದವೀ ಸ್ವರಾಜ್ಯ ಸ್ಥಾಪನೆಯ ವೀರಗಾಥೆ ಆಧಾರಿತ ಶಿವ ಭಾರತ, ಛತ್ರಪತಿ ಶಿವಾಜಿ ಜೀವನ ಚರಿತ್ರೆ ಆಧಾರಿತ ಗೀತ-ನೃತ್ಯ-ಚಿತ್ರ-ಕಥನ ಆಧಾರಿತ ರೂಪಕ ನಡೆಯಿತು.



                 ಇಂದಿನ ಕಾರ್ಯಕ್ರಮ:
     ಫೆ.2 ರಂದು ಬೆಳಿಗ್ಗೆ 8ಕ್ಕೆ 108 ಕಾಯಿಗಳ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ, ಸಂಜೆ ಮಹಾಪೂಜೆ ನಡೆಯಲಿದೆ. ಜೊತೆಗೆ ಬೆಳಿಗ್ಗೆ ಭಜನಾ ಸಂಕೀರ್ತನೆ, ಅಪರಾಹ್ನ 1 ರಿಂದ ಭಕ್ತಿ ಭಾವ ಸಂಗಮ, ಭಜನಾ ಸಂಕೀರ್ತನೆ, ಸಂಜೆ5.30 ರಿಂದ ಧಾರ್ಮಿಕ ಸಭೆ, ರಾತ್ರಿ 8 ರಿಂದ ಭರತನಾಟ್ಯ, ಜನಪದ ನೃತ್ಯ ಪ್ರದರ್ಶನ ಹಾಗೂ ಭಸ್ಮಾಸುರ ಮೋಹಿನಿ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ.

      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries