ಫಲಕ, ಭಿತ್ತಿಪತ್ರ ತೆರವಿಗೆ ಆದೇಶ
0
ಫೆಬ್ರವರಿ 10, 2019
ಉಪ್ಪಳ: ಮಂಗಲ್ಪಾಡಿ ಗ್ರಾಮಪಂಚಾಯತಿಯ ರಸ್ತೆಯಲ್ಲಿ ಅಕ್ರಮವಾಗಿ, ಅಪಾಯಕಾರಿ ರೀತಿಯಲ್ಲಿ ಫಲಕ,ಭಿತ್ತಿಪತ್ರ ಇತ್ಯಾದಿ ಸ್ಥಾಪಿಸಬಾರದು ಎಂದು ಮಂಗಲ್ಪಾಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ತಿಳಿಸಿರುವರು. ಯಾರಾದರೂ ಅವುಗಳನ್ನು ಸ್ಥಾಪಿಸಿದ್ದಲ್ಲಿ ತತ್‍ಕ್ಷಣ ತೆರವುಗೊಳಿಸಬೇಕು. ಇಲ್ಲವಾದರೆ ಗ್ರಾಮ ಪಂಚಾಯತಿ ವತಿಯಿಂದ ತೆರವುಗೊಳಿಸಲಾಗುವುದು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.