ಮೀನು ಕೃಷಿಗೆ ಅರ್ಜಿ ಆಹ್ವಾನ
0
ಫೆಬ್ರವರಿ 04, 2019
ಕಾಸರಗೋಡು: ರಾಜ್ಯ ಸರಕಾರ ಮೀನುಗಾರಿಕಾ ಇಲಾಖೆ ಮೂಲಕ ಜಾರಿಗೊಳಿಸುವ ಜನಪರ ಮೀನು ಕೃಷಿ ಯೋಜನೆಯಲ್ಲಿ ಅಳವಡಿಸಿ ನಿಗದಿತ ರೂಪದ ಕೃಷಿ ರೀತಿಯಲ್ಲಿನಡೆಸುವ ಮೀನು ಸಾಕಣೆ ಕೃಷಿ ಬಗ್ಗೆ ಆಸಕ್ತ ಕೃಷಿಕರಿಂದ ಅರ್ಜಿ ಕೋರಲಾಗಿದೆ. ಕೃತಕ ಕೆರೆಗಳಲ್ಲಿ ಮೀನು ಸಾಕಣೆ, ಒಂದೇ ನೀರಲ್ಲಿ ಸಮೂಹ ಮೀನು ಸಾಕಣೆ, ರೀ ಸಕ್ರ್ಯುಲೇಟರಿ ಅಕ್ವಾ ಕಲ್ಚರ್, ಕೆರೆಗಳಲ್ಲಿಕಾರ್ಪ್ ಮೀನು ಕೃಷಿ, ಒಂದೇ ನೀರಲ್ಲಿ ವಿಶಾಲ ಮೀನು ಸಾಕಣೆ, ಹಿನ್ನೀರಿನಲ್ಲಿ ಮೀನು ಬೀಜೋತ್ಪಾದನೆ ಯೂನಿಟ್, ಒಂದೇ ನೀರಲ್ಲಿ ಮೀನು ಬೀಜ ಪರಿಪಾಲನೆ ಯೂನಿಟ್ ಇತ್ಯಾದಿಗಳು ನಿಗದಿತ ಕೃಷಿರೀತಿಗಳಾಗಿವೆ. ಅರ್ಜಿ ಫಾರಂ ಕಾ?ಂಗಾಡ್ ಫಿಷರೀಸ್ ಡೆಪ್ಯೂಟಿ ಡೈರೆಕ್ಟರ್ ಅವರ ಕಚೇರಿಯಲ್ಲಿ ಲಭ್ಯವಿದೆ. ಭರ್ತಿಗೊಳಿಸಿದ ಅರ್ಜಿಯನ್ನು ಫೆ.10ರ ಮುಂಚಿತವಾಗಿ ಸಲ್ಲಿಸಬಹುದಾಗಿದೆ.