ಅಗಲ್ಪಾಡಿ ಶ್ರೀಕ್ಷೇತ್ರದ ವರ್ಷಾವಧಿ ಉತ್ಸವ
0
ಫೆಬ್ರವರಿ 10, 2019
ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಉತ್ಸವವು ಫೆ.10ರಿಂದ ಆರಂಭಗೊಂಡಿದ್ದು, ಫೆ.15ರ ತನಕ 5 ದಿನಗಳ ಕಾಲ ನಡೆಯಲಿರುವುದು. ಫೆ.10 ಭಾನುವಾರ ರಾತ್ರಿ 8 ಗಂಟೆಗೆ, ಗಣಪತಿ ಪೂಜೆ, ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಂಡಿತು. ಬಳಿಕ ಮಹಾಪೂಜೆ, ಶ್ರೀಭೂತಬಲಿ, ನೃತ್ಯ ಬಲಿ ನಡೆಯಲಿದೆ. ಪ್ರತೀ ದಿನ ರಾತ್ರಿ ಶ್ರೀ ಭೂತಬಲಿ, ನೃತ್ಯ ನಡೆಯಿತು.
ಫೆ.13ರಂದು ರಾತ್ರಿ 8 ಗಂಟೆಗೆ ನಡುದೀಪೋತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯಲಿದೆ. ಫೆ.14ರಂದು ಮಧ್ಯಾಹ್ನ 11.30ಕ್ಕೆ ಶ್ರೀ ಜಟಾಧಾರೀ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ, ಸ್ವೀಕಾರ, ರಾತ್ರಿ 8 ಗಂಟೆಗೆ ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ಸುಡುಮದ್ದು ಪ್ರದರ್ಶನ, ಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯಲಿದೆ. ಫೆ.15ರಂದು ಪೂರ್ವಾಹ್ನ 10 ಗಂಟೆಗೆ ಶ್ರೀ ಭೂತಬಲಿ, ಅವಭೃಥ, ನೃತ್ಯ, ಬಟ್ಳು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಹಾಪೂಜೆ, ಸಂತರ್ಪಣೆ ಜರಗಲಿದೆ. ರಾತ್ರಿ 8 ಗಂಟೆಗೆ ಮಹಾಪೂಜೆ, ಬೆಳಗಿನ ಜಾವ 2.30 ಶ್ರೀ ಜಟಾಧಾರಿ ದೈವದ ಮಹಿಮೆ, ಅರಸಿನ ಹುಡಿ ಪ್ರಸಾದ ಸ್ವೀಕಾರದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಗಲಿದೆ. ಉತ್ಸವದ ದಿನಗಳಲ್ಲಿ ಪ್ರತೀದಿನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.